ಮಂಜೇಶ್ವರ : ವಿಶ್ವ ಹಿಂದು ಪರಿಷತ್ ಮಾತೃ ಮಂಡಳಿ ಮೀಯಪದವು ಇದರ ವತಿಯಿಂದ 25ನೇ ವರ್ಷದ ವಾರ್ಷಿಕ ಶ್ರೀ ವರಮಹಾಲಕ್ಷಿö್ಮ ಪೂಜೆ ಆ.16 ರಂದು ಮೀಯಪದವಿನ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರಗಲಿರುವುದು ಮತ್ತು ರಜತ ವರ್ಷಾಚರಣೆಯ ಪ್ರಯುಕ್ತ ಶ್ರೀ ಚಂಡಿಕಾ ಹವನ ಬೆಳಗ್ಗೆ 8.ರಿಂದ ಆರಂಭವಾಗಿ 11.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.ಕ್ಕೆ ವೇದಮೂರ್ತಿ ಬೋಳಂತಕೋಡಿ ಶ್ರೀರಾಮ ಭಟ್ ರವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷೀ ಪೂಜೆ ಜರಗಲಿದೆ.