ಕಾಸರಗೋಡು: ಅಖಿಲ ಭಾರತ ಎಸ್‍ಸಿ-ಎಸ್‍ಟಿ ಸಂಘಟನೆಗಳ ಒಕ್ಕೂಟ (ಎಐಸಿಎಸ್‍ಟಿಒ) ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮಹಾತ್ಮ ಅಯ್ಯಂಗಾಳಿ ಅವರ 161ನೇ ಜನ್ಮದಿನಾಚರಣೆ ಕಾಸರಗೋಡಿನಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಪುಷ್ಪಾರ್ಚನೆ, ಅಯ್ಯಂಗಾಲಿ ಮತ್ತು ಕೇರಳ ನವೋದಯ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು. ಎಐಸಿಎಸ್‍ಸಿಎಸ್‍ಟಿಓ ರಾಜ್ಯಾಧ್ಯಕ್ಷ ಎನ್. ಬಾಬು ಉದ್ಘಾಟಿಸಿದರು. ಎಐಸಿಸಿಎಸ್‍ಟಿಒ ಕಾಸರಗೋಡು ಜಿಲ್ಲಾಧ್ಯಕ್ಷ ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಓ.ಕೆ.ಪ್ರಭಾಕರನ್ ಮುಖ್ಯ ಭಾಷಣ ಮಾಡಿದರು. ರಾಘವನ್ ಉದುಮ, ಬೇಡು, ಆನಂದ ಕೆ, ವಸಂತ ಅಜಕೋಡ್, ರಾಮಪ್ಪ ಮಂಜೇಶ್ವರಂ, ಚಂದ್ರಶೇಖರ್ ಕುಂಬಳೆ, ನಾರಾಯಣನ್ ಪೆರಿಯ, ಡಿ. ಗೋಪಾಲ ಮತ್ತು ಪದ್ಮನಾಭ ಉಪಸ್ಥಿತರಿದ್ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪೆÇನ್ನಪ್ಪನ್ ಅಮ್ಮಂಗೋಟ್ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಸಿ.ಕೆ. ಗಣೇಶ ವಂದಿಸಿದರು.