ಪಾಲಕ್ಕಾಡ್: ಪಟ್ಟಾಂಬಿಯಲ್ಲಿ ವಿದ್ಯಾರ್ಥಿಗೆ ಥಳಿಸಿದ ಘಟನೆಯಲ್ಲಿ ಎಎಸ್‍ಐಯನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ತ್ರಿಶೂರ್ ರೇಂಜ್ ಡಿಐಜಿ ಆದೇಶ ಹೊರಡಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಎಎಸ್‍ಐ ಜಾಯ್ ಥಾಮಸ್ ಗಂಭೀರ ಲೋಪವೆಸಗಿರುವುದು ತನಿಖಾ ತಂಡ ಪತ್ತೆ ಮಾಡಿದೆ. ಇದನ್ನು ಅನುಸರಿಸಿ ಅಮಾನತುಗೊಳಿಸಲಾಗಿದೆ. ಎಎಸ್ ಐ ಜಾಯ್ ಅವರು ಪಟ್ಟಾಂಬಿ ಸಂಚಾರ ಜಾರಿ ಘಟಕದ ಉಸ್ತುವಾರಿ ವಹಿಸಿದ್ದರು.
ಎರಡು ದಿನಗಳ ಹಿಂದೆ ಜಾಯ್ ಮನೆಯೊಂದಕ್ಕೆ ನುಗ್ಗಿ 16 ವರ್ಷದ ಯುವಕನಿಗೆ ಥಳಿಸಿದ್ದ. ಜಾಯ್ ಥಾಮಸ್ ಅವರನ್ನು ಈ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಶೋರ್ನೂರು ಡಿವೈಎಸ್ಪಿ ಆರ್. ಮನೋಜ್ ಕುಮಾರ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಪೋಲಿಸರು ಮಾಡಬಾರದ ಕ್ರಮವನ್ನು ಎಎಸ್‍ಐ ಕೈಗೊಂಡಿದ್ದ ಎಂದು ಡಿವೈಎಸ್ಪಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತನಿಖಾ ತಂಡವು ಸಂತ್ರಸ್ಥ ಮತ್ತು ಆತನ ಕುಟುಂಬದೊಂದಿಗೆ ಮಾತನಾಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಎಎಸ್‍ಐನಿಂದ ಗಂಭೀರ ಲೋಪ ಎಸಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.