HEALTH TIPS

ಸೈಬರ್‌ ವಂಚನೆ: ಜನರ ಖಾತೆಗಳಿಂದ ₹177 ಕೋಟಿ ಖೋತಾ!

 ವದೆಹಲಿ: 2023-24ನೇ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಸೈಬರ್‌ ವಂಚನೆಯ ಮೂಲಕ ಜನರ ಖಾತೆಗಳಿಂದ ₹177 ಕೋಟಿ ಕಳವು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಲೋಕಸಭೆಯಲ್ಲಿ ಈ ಸಂಬಂಧ ಲಿಖಿತ ರೂಪದಲ್ಲಿ ಉತ್ತರಿಸಿರುವ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಹಾಗೂ ಇಂಟರ್‌ನೆಟ್‌ ಮೂಲಕ ಜನರಿಗೆ ₹177.05 ಕೋಟಿ ವಂಚನೆ ಎಸಗಲಾಗಿದೆ.

2022-23ನೇ ಆರ್ಥಿಕ ವರ್ಷದಲ್ಲಿ ಈ ಪ್ರಮಾಣ ₹69.68 ಕೋಟಿ ಇತ್ತು ಎಂದು ತಿಳಿಸಿದ್ದಾರೆ.

ಸೈಬರ್‌ ವಂಚಕರು 2021-22ನೇ ಸಾಲಿನಲ್ಲಿ ₹80.33 ಕೋಟಿ, 2020-21ನೇ ಸಾಲಿನಲ್ಲಿ ₹50.10 ಕೋಟಿ ಹಾಗೂ 2019-20ನೇ ಆರ್ಥಿಕ ವರ್ಷದಲ್ಲಿ ₹44.22 ಕೋಟಿ ವಂಚಿಸಿದ್ದಾರೆ. ಸೈಬರ್‌ ವಂಚನೆ ಅಪರಾಧಗಳ ಸಂಬಂಧ ಅನಧಿಕೃತ ಇ-ಬ್ಯಾಂಕಿಂಗ್‌ ವ್ಯವಹಾರಗಳಿಗೆ ಮಿತಿ ಹೇರುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries