ತಿರುವನಂತಪುರಂ: ಕೇರಳದಲ್ಲಿ ಪರಿಹಾರ ಕಾರ್ಯಕ್ಕೆ ಇಡೀ ದೇಶವೇ ಕೈಜೋಡಿಸಿರುವ ಮಧ್ಯೆ ಮುಖ್ಯಮಂತ್ರಿ ತನ್ನ ಸಾಧನೆಗಳನ್ನು ಪ್ರಸ್ತುಪಡಿಸಲು ಇಳಿದಿರುವುದು ಚರ್ಚೆಗೊಳಗಾಗುತ್ತಿದೆ.
ಅಕ್ಕಪಕ್ಕದ ರಾಜ್ಯಗಳಲ್ಲೂ ತಮ್ಮ ಆಡಳಿತ ಕೌಶಲವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆಡಳಿತದ ಸಾಧನೆ ಏನು ಎಂಬುದು ಕೇರಳದ ಜನತೆಗೆ ಚೆನ್ನಾಗಿ ಗೊತ್ತಿದೆ.
ಐದು ರಾಜ್ಯಗಳಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಬೆಳ್ಳಿತೆರೆಯಲ್ಲಿ ಪ್ರದರ್ಶಿಸಲು 18 ಲಕ್ಷ ರೂ.ವೆಚ್ಚಮಾಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ದೆಹಲಿಯ ಚಿತ್ರಮಂದಿರಗಳಲ್ಲಿ ಕೇರಳ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ.
ಒಂದೂವರೆ ನಿಮಿಷದ ಈ ವೀಡಿಯೋ ನಗರ ಕೇಂದ್ರಗಳ 100 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಕಾರ್ಯದರ್ಶಿಗಳನ್ನೊಳಗೊಂಡ ಕಾರ್ಯತಂಡದ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವೀಡಿಯೊವನ್ನು ತಯಾರಿಸಲು ಏಜೆನ್ಸಿಗಳು ಮುಂದೆಬಂದಿದೆ. ಕನಿಷ್ಠ 28 ದಿನಗಳ ಕಾಲ ವೀಡಿಯೊ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಸೋಮವಾರ 18 ಲಕ್ಷದ 19,843 ರೂ. ಮಂಜೂರಾಗಿದೆ.
ಪಿಆರ್.ಡಿಎಂ ಮತ್ತು ಕ್ಯೂಬ್ ಹಾಗೂ ಯುಎಫ್ ಒ ನಂತಹ ಏಜೆನ್ಸಿಗಳ ಮೂಲಕ ಪ್ಯಾನೆಲ್ ಮಾಡಿದ ಏಜೆನ್ಸಿಗಳಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದು ಉಪಗ್ರಹ ಲಿಂಕ್ ಮೂಲಕ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.
ನವಕೇರಳ ಸಮಾವೇಶ ಅಭಿಯಾನಕ್ಕೆ ಹೋರ್ಡಿಂಗ್‍ಗಳ ಮೂಲಕ 2 ಕೋಟಿ 46 ಲಕ್ಷ ರೂ.ವೆಚ್ಚಮಾಡಲಾಗಿದೆ. ಕೇರಳದಾದ್ಯಂತ 364 ಹೋರ್ಡಿಂಗ್‍ಗಳನ್ನು ಅಳವಡಿಸಲಾಗಿದೆ. ಪಿಆರ್ ಡಿ ಆರಂಭದಲ್ಲಿ 55 ಕೋಟಿ ರೂ. ವೆಚ್ಚ ಸಿದ್ಧಪಡಿಸಿದ ಅಂದಾಜನ್ನು ನಂತರ ಹೆಚ್ಚಿಸಲಾಯಿತು. ಕಲಾ ಕಾರ್ಯಕ್ರಮ ಆಯೋಜಿಸಲು 48 ಲಕ್ಷ ರೂ., ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಪ್ರಚಾರ ಪೋಸ್ಟರ್ ಹಾಕಲು 16.99 ಲಕ್ಷ ರೂ., ರೈಲ್ವೇ ಪ್ರಚಾರಕ್ಕೆ É 41.21 ಲಕ್ಷ ರೂ.ವೆಚ್ಚಮಾಡಲಾಗಿದೆ ಎಂದು ಸರ್ಕಾರ ನೀಡಿರುವ ಅಂಕಿಅಂಶವಾಗಿದೆ.