ಮಂಜೇಶ್ವರ : ಯಕ್ಷಬಳಗ ಹೊಸಂಗಡಿ ಯಕ್ಷಗಾನ ಸಂಘಟನೆಯ 34ನೇ ವರ್ಷದ ಕರ್ಕಾಟಕ ಮಾಸ ತಾಳಮದ್ದಳೆ ಕೂಟ ಸಮಾರೋಪ ಸಮಾರಂಭ ಆ. 18 ರಂದು ಭಾನುವಾರ ಪೂರ್ವಾಹ್ನ 10 ರಿಂದ ಮೂಡಂಬೈಲು, ಅಪ್ಪತ್ತಿಮಾರ್ ಸುರೇಶ ಪದಕಣ್ಣಾಯರ ಮನೆ ʼನಾರಾಯಣೀಯಂʼ ನಲ್ಲಿ ಜರಗಲಿದೆ. ಈ ಸಂದರ್ಭ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಹಿರಿಯರ ನೆನಪು ಕಾರ್ಯಕ್ರಮ ಜರಗಲಿದ್ದು, ಕೀರ್ತಿ ಶೇಷ ಮೀಯಪದವು ಕೃಷ್ಣ ರಾವ್ ಅವರ ನೆನಪು ನಡೆಯಲಿದೆ.
ಯಕ್ಷಗಾನ ಕಲಾವಿದ ಹರೀಶ್ಚಂದ್ರ ನಾಯ್ಗ ಮಾಡೂರು ಅವರಿಗೆ ಯಕ್ಷಬಳಗ ವಾರ್ಷಿಕ ಗೌರವಾರ್ಪಣೆ ನಡೆಯಲಿದೆ.
ಹಿರಿಯ ಅರ್ಥಧಾರಿ ಸಾಹಿತಿ ರಾಧಾಕೃಷ್ನ ಕಲ್ಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಯೋಗೀಶ ರಾವ್ ಚಿಗುರುಪಾದೆ ಹಿರಿಯರ ನೆನಪುಗೈಯಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಪ್ರಾಸ್ತಾವಿಕ ನುಡಿಗಳನ್ನಾಡುವರು. ಶಿವರಾಮ ಪದಕಣ್ಣಾಯ ಅಪ್ಪತ್ತಿಮಾರ್, ವೇ.ಮೂ. ಬಾಲಕೃಷ್ಣ ಭಟ್ ದಡ್ಡಂಗಡಿ ಗೌರವ ಉಪಸ್ಥಿತರಿರುವರು. . ನ್ಯಾಯವಾದಿ ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು ಉಪಸ್ಥಿತರಿರುವರು.
ಬಳಿಕ ಯಕ್ಷಬಳಗ ಹೊಸಂಗಡಿ ತಂಡ ಹಾಗೂ ಅತಿಥಿಕಲಾವಿದರಿಂದ ಕರ್ಣಾರ್ಜುನ ಕಾಳಗ ತಾಳಮದ್ದಳೆ ಜರಗಲಿದ್ದು ಅತಿಥಿ ಕಲಾವಿದರಾಗಿ ರಾದಾಕೃಷ್ಣ ಕಲ್ಚಾರ್ ಹಾಗೂ ಜಬ್ಬಾರ್ ಸಮೋ ಸಂಪಾಜೆ ಭಾಗವಹಿಸಲಿದ್ದಾರೆ ಎಂದು ಯಕ್ಷಬಳಗ ಸಂಚಾಲಕ ಸಂಕಬೈಲು ಸತೀಶ ಅಡಪ ತಿಳಿಸಿದ್ದಾರೆ.