HEALTH TIPS

ಫ್ಯಾಶನ್‍ಗೋಲ್ಡ್ ವಂಚನಾ ಪ್ರಕರಣ-19.60ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

        ಕಾಸರಗೋಡು: ಜಿಲ್ಲೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಪ್ಯಾಶನ್ ಗೋಲ್ಡ್ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ನಡೆಸುತ್ತಿರುವ ಎನ್‍ಫೋರ್ಸ್‍ಮೆಂಟ್ ಡೈರೆಕ್ಟರೇಟ್(ಇ.ಡಿ)ಸಂಸ್ಥೆಗೆ ಸೇರಿದ್ದ 19.6ಕೋಟಿ ರೂ. ಮೊತ್ತದ ಆಸ್ತಿ ಜಪ್ತಿ ಮಾಡಿದೆ.

ಫ್ಯಾಶನ್‍ಗೋಲ್ಡ್ ಚೇರ್‍ಮ್ಯಾನ್, ಮುಸ್ಲಿಂಲೀಗ್ ಮುಖಂಡ ಹಾಗೂ ಮಂಜೇಶ್ವರದ ಮಾಜಿ ಶಾಸಕ ಎಂ.ಸಿ ಕಮರುದ್ದೀನ್‍ಸಂಸ್ಥೆ ಆಡಳಿತ ನಿರ್ದೇಶಕ ಟಿ.ಕೆ ಪೂಕೋಯ ತಙಳ್ ಸೇರಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಅರೋಪಿಗಳ ವಿರುದ್ಧ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಲ್ಲಾಗಿ 168ಕೇಸು ಈಗಾಗಲೇ ದಾಖಲಾಗಿದೆ. ಪ್ರಸಕ್ತ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿದೆ. ಕ್ರೈಂ ಬ್ರಾಂಚ್ ತನಿಕೆ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿ, ಆಸ್ತಿ ಜಪ್ತಿಮಾಡಿಕೊಂಡಿದೆ.

       ಉತ್ತಮ ಲಾಭಾಂಶ ನೀಡುವ ಭರವಸೆಯೊಂದಿಗೆ  ಠೇವಣಿ ಸಂಗ್ರಹಿಸಿ, ನಂತರ ಗ್ರಾಹಕರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ರೈಂ ಬ್ರಾಂಚ್ ಮತ್ತೊಂದು ಕೇಸು ದಾಖಲಿಸಿಕೊಂಡಿದೆ.ಒಟ್ಟು 20ಕೋಟಿ ರೂ. ಮೊತ್ತದ ವಂಚನೆಯನ್ನು ಕ್ರೈಂ ಬ್ರಾಂಚ್ ಬಯಲಿಗೆಳೆದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries