ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಅಸ್ಸಾಂನ 19 ಕಡೆ ಬಾಂಬ್ ಇಟ್ಟಿದ್ದೆವು. ಆದರೆ, ತಾಂತ್ರಿಕ ದೋಷದಿಂದ ಅವುಗಳು ಸ್ಫೋಟಗೊಂಡಿಲ್ಲ ಎಂದು ಅಸ್ಸಾಂನ ದಂಗೆಕೋರ ಗುಂಪು ಉಲ್ಫಾ ಇಂಡಿಪೆಂಡೆಂಟ್(Ulfa-I) ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ರಾಜಧಾನಿ ಗುವಾಹಟಿಯ 8 ಪ್ರದೇಶಗಳು ಸೇರಿದಂತೆ 19 ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆಳಿಗ್ಗೆ 11.30ರ ಸುಮಾರಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅದು ತಿಳಿಸಿದೆ. ಬಾಂಬ್ ಇರಿಸಲಾಗಿರುವ ಕೆಲವು ಪ್ರದೇಶಗಳ ಚಿತ್ರಗಳನ್ನೂ ನಿಷೇಧಿತ ಸಂಘಟನೆ ಹಂಚಿಕೊಂಡಿದೆ.
ಅದರಲ್ಲಿ ಒಂದು ಪ್ರದೇಶವು ರಾಜಧಾನಿ ಗುವಾಹಟಿಯ ದಿಸ್ಪುರ್‌ನ ಸರ್ಕಾರಿ ಕಾರ್ಯಾಲಯಗಳ ಬಳಿ ಇದೆ.
ಇದಕ್ಕೂ ಮೊದಲು, ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆಯ ಬಹಿಷ್ಕಾರಕ್ಕೆ ಉಲ್ಫಾ-ಐ ಕರೆ ನೀಡಿತ್ತು. ಬೆಳಿಗ್ಗೆ 6 ರಿಂದ 12 ಗಂಟೆಯೊಳಗೆ ಬಾಂಬ್‌ಗಳು ಸ್ಫೋಟಗೊಳ್ಳಬೇಕಿತ್ತು ಎಂದು ಅದು ತಿಳಿಸಿದೆ.
ಅಲ್ಲದೆ, ಬಾಂಬ್‌ಗಳನ್ನು ತೆಗೆಯುವವರೆಗೂ ಅಥವಾ ನಿಷ್ಕ್ರಿಯಗೊಳಿಸುವವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆಯೂ ಸಂಘಟನೆ ತಿಳಿಸಿದೆ.
1979ರಲ್ಲಿ 'ಸಾರ್ವಭೌಮ ಅಸ್ಸಾಂ" ಬೇಡಿಕೆ ಇಟ್ಟುಕೊಂಡು ಉಲ್ಫಾರೂಪುಗೊಂಡಿತು. ಈ ಪೈಕಿ ಅಧ್ಯಕ್ಷ ಅರಬಿಂದ ರಾಜ್‌ಖೋವಾ ನೇತೃತ್ವದ ಒಂದು ಬಣವು ಕೆಲವು ತಿಂಗಳ ಹಿಂದೆ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ಪರೇಶ್ ಬರುವಾ ನೇತೃತ್ವದ ಉಲ್ಫಾ-ಐ ಬಣ ಇನ್ನೂ ಶಾಂತಿ ಪ್ರಕ್ರಿಯೆಯನ್ನು ಒಪ್ಪಿಕೊಂಡಿಲ್ಲ.