ಬದಿಯಡ್ಕ: ಹಾಸನದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆ.19ರಂದು ಬೆಳಗ್ಗೆ 11.30ರಿಂದ 'ರಕ್ಷಾ ಬಂಧನದ ಸಂದೇಶ' ಎಂಬ ವಿಚಾರದಲ್ಲಿ ಉಪನ್ಯಾಸ ನಡೆಯಲಿದೆ.
ನಿವೃತ್ತ ಶಿಕ್ಷಕಿ ಹಾಸನದ ಕಲಾವತಿ ಮಧುಸೂದನ ಅವರು ಉಪನ್ಯಾಸ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಕೆ ವಾಮನ್ ರಾವ್ ಬೇಕಲ್ ವಹಿಸಲಿದ್ದಾರೆ. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ್ ಪಜಿಲ ಹಾಗೂ ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶುಭಾಶಂಸನೆಗೈಯ್ಯುವರು ಎಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಕಾಸರಗೋಡು ಘಟಕದ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.