ಬಿ.ಎಸ್.ಎನ್.ಎಲ್. ಟೆಲಿಕಾಂ ವಲಯದಲ್ಲಿ ಮತ್ತೆ ನಾಗಾಲೋಟದ ಸಿದ್ದತೆಯಲ್ಲಿರುವುದು ಚರ್ಚೆಯಾಗಿದೆ. ಕಂಪನಿಯು ಆಶ್ಚರ್ಯಕರ ಪ್ರಕಟಣೆಗಳು ಮತ್ತು ಬದಲಾವಣೆಗಳನ್ನು ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.
4ಜಿ ಮತ್ತು 5ಜಿ ಸೇವೆಗಳು ಶೀಘ್ರದಲ್ಲೇ ಸಾಕಾರಗೊಳ್ಲಲಿದೆ ಎಂದು ವರದಿಗಳಿಂದ ಸ್ಪಷ್ಟವಾಗಿದೆ. ಏತನ್ಮಧ್ಯೆ, ಬಿ.ಎಸ್.ಎನ್.ಎಲ್. 5 ಜಿ ಸ್ಮಾರ್ಟ್‍ಪೋನ್ ಅನ್ನು ಬಿಡುಗಡೆ ಮಾಡಲಿದೆ ಎಂಬುದು ಇತ್ತೀಚಿನ ಸುದ್ದಿ.
ಮುಂಬರುವ ಪೋನ್ 200MP ಕ್ಯಾಮೆರಾ, 7000 mAh ಬ್ಯಾಟರಿ ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಸುದ್ದಿ ದೇಶಾದ್ಯಂತ ಹರಡುತ್ತಿದ್ದಂತೆ ಬಿಎಸ್‍ಎನ್‍ಎಲ್ ವಿವರಣೆ ನೀಡಲು ಮುಂದಾಗಿದೆ.
ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ಬಿ.ಎಸ್.ಎನ್.ಎಲ್ ಎಚ್ಚರಿಸಿದೆ ಮತ್ತು ಬಿ.ಎಸ್.ಎನ್.ಎಲ್. ಪ್ರಸ್ತುತ ಅಂತಹ ಪೋನ್ ಅನ್ನು ಪ್ರಾರಂಭಿಸುವ ಉದ್ದೇಶಿಸಿಲ್ಲ. ಸುಳ್ಳುಸುದ್ದಿಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಜಾಗರೂಕರಾಗಿರಿ. ಹಾಗೂ bsnl.co.in ಕಂಪನಿಯ ವೆಬ್‍ಸೈಟ್‍ಗೆ ಭೇಟಿ ನೀಡಲು ಸಹ ಸೂಚಿಸಲಾಗಿದೆ.