ಮಂಜೇಶ್ವರ: ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗದ ವಾರ್ಷಿಕ ಕಾರ್ಯಕ್ರಮ ‘ಯಕ್ಷ ಚಿಗುರು- 2024ʼ ಆ. 10 ರಂದು ಶನಿವಾರ ಅಪರಾಹ್ನ 2.ರಿಂದ ಶ್ರೀ ಮಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಬಜೆ ಕ್ಷೇತ್ರದಲ್ಲಿ ಜರಗಲಿದೆ.
ಅಪರಾಹ್ನ ಪ್ರಸಿದ್ದ ಕಲಾವಿದರಿಂದ ತಾಳಮದ್ದಳೆ ʼಕರ್ಣ ಭೇದನʼ ನಡೆಯಲಿದ್ದು ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಲವಕುಮಾರ್ ಐಲ, ಕು.ವಂದನಾ ಮಾಲೆಂಕಿ ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ ಮಧೂರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ನಾ.ಕಾರಂತ ಪೆರಾಜೆ ಪಾಲ್ಗೊಳ್ಳುವರು.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಗಿರಿಧರ ರಾವ್ ಎಂ.ಎಸ್. ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅಭ್ಯಾಗತರಾಗಿ ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಜಗದೀಶ ಶೆಟ್ಟಿ ಎಲಿಯಾಣ, ಸತೀಶ ಅಡಪ ಸಂಕಬೈಲು, ದಾಮೋದರ ಮಯ್ಯ ಬಜೆ ಹಾಗೂ ದೇವಕಾನ ಶ್ರೀಕೃಷ್ಣ ಭಟ್ ಉಪಸ್ಥಿತರಿರುವರು.
ಈ ಸಂದರ್ಭ ಯಕ್ಷಚಿಗುರು-24 ವಾರ್ಷಿಕ ಪ್ರಶಸ್ತಿಯನ್ನು ಪೈವಳಿಕೆಯ ಶ್ರೀಗಣೇಶ ಕಲಾವೃಂದ ಕಲಾಸಂಸ್ಥೆಗೆ ನೀಡಲಾಗುವುದು. ಸಂಜೆ ಆರರಿಂದ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಸದಸ್ಯರಿಂದ ಯಕ್ಷಗಾನ ಬಯಲಾಟ ʼದಕ್ಷಾಧ್ವರ-ಗಿರಿಜಾ ಕಲ್ಯಾಣʼಜರಗಲಿದೆ ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.