HEALTH TIPS

ಗುರುನರಸಿಂಹ ಯಕ್ಷಬಳಗ ತಂಡದಿಂದ ಯಕ್ಷಚಿಗುರು-2024: ಗಣೇಶ ಕಲಾವೃಂದಕ್ಕೆ ಪ್ರಶಸ್ತಿ ಪ್ರದಾನ

             ಮಂಜೇಶ್ವರ: ಮೀಯಪದವು ಶ್ರೀ ಗುರುನರಸಿಂಹ ಯಕ್ಷಬಳಗ ತಂಡದ ವಾರ್ಷಿಕ ಕಾರ್ಯಕ್ರಮ ‘ಯಕ್ಷಚಿಗುರು-2024ʼ ಇತ್ತೀಚೆಗೆ ದೇಲಂತೊಟ್ಟು ಬಜೆ ಶ್ರೀಮಹಾವಿಷ್ಣು ದೇವಸ್ಥಾನ ಕ್ಷೇತ್ರದಲ್ಲಿ ಜರಗಿತು. ಯಕ್ಷಚಿಗುರು- 24 ಪ್ರಶಸ್ತಿಯನ್ನು ಯಕ್ಷಗಾನ ವೇಷಭೂಷಣ-ಪ್ರಸಾಧನ ವ್ಯವಸ್ಥಾಪನಾ ಸಂಸ್ಥೆಯಾದ ಪೈವಳಿಕೆಯ ಶ್ರೀಗಣೇಶ ಕಲಾವೃಂದಕ್ಕೆ ಗಣ್ಯರ ಸಮಕ್ಷಮ ಪ್ರದಾನ ಗೈಯ್ಯಲಾಯಿತು.

            ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ  ಹೆಚ್ಚುವರಿ ನಿರ್ದೇಶಕ ಡಾ.ಗಿರಿಧರ ರಾವ್ ಎಂ. ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತಮನಾಡಿದ ಅವರು, ಸರ್ವ ಸಂಪನ್ನವಾದ ಯಕ್ಷಗಾನಕಲೆ ಭಾರತೀಯ ಸಂಸ್ಕøತಿಯ ಪ್ರತೀಕ.  ಸ್ವಚ್ಚ ಸುಂದರ ಕನ್ನಡ ಭಾಷೆ ಉಳಿಸುವಲ್ಲಿ, ಪೌರಾಣಿಕ ಕತೆಗಳನ್ನು ಜನರಿಗೆ ತಲಪಿಸುವಲ್ಲಿ ಯಕ್ಷಗಾನದ ಪಾತ್ರ ದೊಡ್ಡದು. ಗುರುನರಸಿಂಹ ಯಕ್ಷಬಳಗ ತಂಡ ಗ್ರಾಮೀಣ ಪ್ರದೇಶದಲ್ಲಿ ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ. ಯಕ್ಷಚಿಗುರು ವಾರ್ಷಿಕ ಪ್ರಶಸ್ತಿ ತಂಡಗಳಿಗೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

             ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಮೀಯಪದವು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ, ದಾಮೋದರ ಮಯ್ಯ ಬಜೆ ಉಪಸ್ಥಿತರಿದ್ದರು. ಪೈವಳಿಕೆಯ ಶ್ರೀಗಣೇಶ ಕಲಾವೃಂದದ ಸಂಚಾಲಕ ದೇವಕಾನ ಶ್ರೀಕೃಷ್ಣ ಭಟ್,ಸುನಿತಾ ಭಟ್ ದೇವಕಾನ, ಗುರುನರಸಿಂಹ ಯಕ್ಷಬಳಗದ ಅಧ್ಯಕ್ಷ ಗಣೇಶ ನಾವಡ ಮೀಯಪದವು, ಗೋಪಾಲಕೃಷ್ಣ ಭಟ್ ಕಾನ, ಜಯಂತ ಸಜಂಕಿಲ,ರಾಧಾಕೃಷ್ಣ ಮಾಸ್ತರ್ ಪೈವಳಿಕೆ ಉಪಸ್ಥಿತರಿದ್ದರು.

              ಅಪರಾಹ್ನ ಪ್ರಸಿದ್ದ ಕಲಾವಿದರಿಂದ ಕರ್ಣ ಭೇದನ ತಾಳಮದ್ದಳೆ ಕೂಟ ಜರಗಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಲವಕುಮಾರ್ ಐಲ, ಕು. ವಂದನಾ ಮಾಲೆಂಕಿ, ಗೌತಮ ನಾವಡ ಮಜಿಬೈಲು ಭಾಗವಹಿಸಿದ್ದು, ಅರ್ಥಧಾರಿಗಳಾಗಿ ಕೃಷ್ಣನ ಪಾತ್ರದಲ್ಲಿ ವಾಸುದೇವ ರಂಗಾ ಭಟ್ ಮಧೂರು, ಕರ್ಣನಾಗಿ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಕುಂತಿಯಾಗಿ ನಾ. ಕಾರಂತ ಪೆರಾಜೆ ಪಾತ್ರಗಳನ್ನು ನಿರ್ವಹಿಸಿದರು. 

          ರಾತ್ರಿ ಗುರು ನರಸಿಂಹ ಯಕ್ಷಬಳಗ ಮೀಯಪದವು ತಂಡದ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ದಕ್ಷಾಧ್ವರ ಗಿರಿಜಾಕಲ್ಯಾಣ ಯಕ್ಷಗಾನ ಬಯಲಾಟ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries