ನವದೆಹಲಿ: ಭಾರತದ ಜನಸಂಖ್ಯೆ 2036ರ ಹೊತ್ತಿಗೆ 152.2 ಕೋಟಿ ತಲುಪಲಿದ್ದು, ಲಿಂಗಾನುಪಾತದಲ್ಲಿಯೂ ಸುಧಾರಣೆ ಕಾಣಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈಗಾಗಲೇ ಭಾರತ, ಜನಸಂಖ್ಯೆಯಲ್ಲಿ ನೆರೆಯ ಚೀನಾವನ್ನು ಮೀರಿಸಿದ್ದು, ವಿಶ್ವದ ಅತಿದೊಡ್ಡ ಜನಸಂಖ್ಯಾ ದೇಶವೆಂಬ ಹೆಗ್ಗಳಿಕೆಯನ್ನು ಹೊಂದಿದೆ.
ನವದೆಹಲಿ: ಭಾರತದ ಜನಸಂಖ್ಯೆ 2036ರ ಹೊತ್ತಿಗೆ 152.2 ಕೋಟಿ ತಲುಪಲಿದ್ದು, ಲಿಂಗಾನುಪಾತದಲ್ಲಿಯೂ ಸುಧಾರಣೆ ಕಾಣಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈಗಾಗಲೇ ಭಾರತ, ಜನಸಂಖ್ಯೆಯಲ್ಲಿ ನೆರೆಯ ಚೀನಾವನ್ನು ಮೀರಿಸಿದ್ದು, ವಿಶ್ವದ ಅತಿದೊಡ್ಡ ಜನಸಂಖ್ಯಾ ದೇಶವೆಂಬ ಹೆಗ್ಗಳಿಕೆಯನ್ನು ಹೊಂದಿದೆ.
ವ್ಯುಮೆನ್ ಅಂಡ್ ಮೆನ್ ಇನ್ ಇಂಡಿಯಾ 2023ರ ವರದಿಯ ಪ್ರಕಾರ ಭಾರತ ಜನಸಂಖ್ಯೆ 2036ನೇ ವರ್ಷಕ್ಕೆ 152.2 ಕೋಟಿ ತಲುಪಲಿದೆ. ಇದರಲ್ಲಿ ಪುರುಷರ ಪ್ರಮಾಣ ಶೇ. 48.5ಕ್ಕೆ ಹೋಲಿಕೆ ಮಾಡಿದರೆ ಮಹಿಳೆಯರ ಪ್ರಮಾಣ ಶೇ. 48.8ಕ್ಕೆ ಹೆಚ್ಚಾಗಲಿದೆ. ಈ ಅಂಕಿ-ಅಂಶ ಗಮನಿಸಿದರೆ ಲಿಂಗಾನುಪಾತದಲ್ಲಿ ಮಹತ್ವದ ಸುಧಾರಣೆ ಕಾಣಲಿದೆ.
ಈ ವರದಿಯ ಪ್ರಕಾರ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಪ್ರಮಾಣವು 2011 ರಿಂದ 2036 ರವರೆಗೆ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಫಲವತ್ತತೆಯ ದರಗಳು ಕುಂಠಿತವಾಗುತ್ತಿರುವುದು. ಇದಕ್ಕೆ ತದ್ವಿರುದ್ಧವಾಗಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ ಈ ಸಮಯದಲ್ಲಿ ಹೆಚ್ಚಾಗಲಿದೆ.
2011ಕ್ಕೆ ಹೋಲಿಕೆ ಮಾಡಿದರೆ 2036ರ ಹೊತ್ತಿಗೆ ದೇಶದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಲಿದೆ. 2011ರಲ್ಲಿ 1000 ಪುರುಷರಿಗೆ 943 ಮಹಿಳೆಯರಿದ್ದರು. ಆದರೆ, 20236ರ ಹೊತ್ತಿಗೆ 954ಕ್ಕೆ ಏರಿಕೆಯಾಗಲಿದ್ದು, ಇದು ಲಿಂಗಾನುಪಾತದಲ್ಲಿ ಗಣನೀಯ ಬದಲಾವಣೆ ಹಾಗೂ ಲಿಂಗ ಸಮಾನತೆಯ ಪಾಸಿಟಿವ್ ಟ್ರೆಂಡ್ ಅನ್ನು ಸೂಚಿಸುತ್ತದೆ.
ಅಂದಹಾಗೆ ಈ ವರದಿಯು ಭಾರತದಲ್ಲಿನ ಮಹಿಳೆಯರು ಮತ್ತು ಪುರುಷರ ಪರಿಸ್ಥಿತಿಯ ಸಮಗ್ರ ನೋಟವನ್ನು ನೀಡುತ್ತದೆ. ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಆರ್ಥಿಕ ಭಾಗವಹಿಸುವಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಡೇಟಾವನ್ನು ಈ ವರದಿ ಒದಗಿಸುತ್ತದೆ. ಇದು ನಗರ-ಗ್ರಾಮೀಣ ವಿಭಾಗಗಳು ಮತ್ತು ಪ್ರದೇಶಗಳಾದ್ಯಂತ ಲಿಂಗ-ವಿಂಗಡಣೆಯ ಡೇಟಾವನ್ನು ಪ್ರಸ್ತುತಪಡಿಸುತ್ತದೆ ಮತ್ತು ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ. ಈ ವರದಿಯ ಪ್ರಮುಖ ಸೂಚಕಗಳನ್ನು ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಪ್ರಕಟಿತ ಡೇಟಾದಿಂದ ಪಡೆಯಲಾಗಿದೆ.