HEALTH TIPS

'2047ರ ವೇಳೆಗೆ ವಿಕಸಿತ ಭಾರತ’ ನಮ್ಮ ಗುರಿ, 140 ಕೋಟಿ ಜನರಿಂದ ಹೊಸ ಭಾರತ ನಿರ್ಮಾಣ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ‘2047ರ ವೇಳೆಗೆ ವಿಕಸಿತ ಭಾರತ’ ನಮ್ಮ ಗುರಿಯಾಗಿದ್ದು, ದೇಶದ 140 ಕೋಟಿ ಜನರಿಂದ ಹೊಸ ಭಾರತ ನಿರ್ಮಾಣವಾಗಲಿದೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.

78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿಯವರು ಭಾಷಣ ಮಾಡಿದರು.

ಇಂದು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸುವ ಪರ್ವ. ರಾಷ್ಟ್ರದ ನಿರ್ಮಾಣಕ್ಕಾಗಿ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಸೇನಾನಿಗಳಿಗೆ ಹೃದಯಪೂರ್ವಕ ನಮನ. ಭಾರತದ ಸ್ವಾತಂತ್ರ್ಯ ಸೇನಾನಿಗಳಿಗೆ ನಾವು ಋಣಿಯಾಗಿದ್ದೇವೆ. ರಾಷ್ಟ್ರದ ರಕ್ಷಣೆಗೆ ಯೋಗದಾನ ನೀಡಿದವರಿಗೂ ನನ್ನ ನಮನಗಳು ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ನೈಸರ್ಗಿಕ ವಿಕೋಪಗಳು ನಮ್ಮ ಕಳವಳಗಳನ್ನು ಹೆಚ್ಚಿಸಿವೆ. ಇದರಿಂದ ಹಾನಿಗೊಳಗಾದ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ನೈಸರ್ಗಿಕ ವಿಕೋಪಗಳಿಂದಾಗಿ ನಮ್ಮ ಆತಂಕ ಹೆಚ್ಚುತ್ತಿದೆ. ಅನೇಕ ಜನರು ಇದರಿಂದ ತಮ್ಮ ಕುಟುಂಬಗಳು, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ದೇಶ ಕೂಡ ನಷ್ಟಗಳನ್ನು ಅನುಭವಿಸಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ದೇಶ ಅವರ ಜತೆಗೆ ಇದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ.

ಭಾರತದಿಂದ ವಸಾಹತುಶಾಹಿ ಆಡಳಿತವನ್ನು ಕಿತ್ತೊಗೆದ 40 ಕೋಟಿ ಜನರ ರಕ್ತವನ್ನು ನಾವು ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿ. 40 ಕೋಟಿ ಜನರು ಸ್ವಾತಂತ್ರ್ಯ ಪಡೆಯಲು ದಾಸ್ಯದ ಸಂಕೋಲೆಗಳನ್ನು ಮುರಿಯಬಹುದು ಎಂದರೆ, 140 ಕೋಟಿ ಜನರು ಏನನ್ನು ಸಾಧಿಸಬಹುದು ಎಂಬುದನ್ನು ಊಹಿಸಿ. ನಮ್ಮ ದೃಢ ನಿರ್ಧಾರದಿಂದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾವು ಸಮರ್ಥರಿದ್ದೇವೆ.

ವಿಕಸಿತ ಭಾರತ 2047 ದೃಢ ಸಂಕಲ್ಪದ ಪ್ರತಿಫಲನ ಹಾಗೂ 140 ಕೋಟಿ ಜನರ ಕನಸು. 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿಸಲು ಜನರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಇದರಲ್ಲಿ ದೇಶವನ್ನು ಉತ್ಪಾದನಾ ಹಬ್, ಬೀಜದ ರಾಜಧಾನಿಯನ್ನಾಗಿಸುವುದು ಸೇರಿದೆ. ಆಡಳಿತ ಸುಧಾರಣೆ, ತ್ವರಿತ ನ್ಯಾಯದಾನ ವ್ಯವಸ್ಥೆ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಉತ್ತೇಜನದ ಸಲಹೆಗಳನ್ನೂ ನೀಡಿದ್ದಾರೆ.

ಜಲ ಜೀವನ ಯೋಜನೆಯು 15 ಕೋಟಿ ಫಲಾನುಭವಿಗಳನ್ನು ತಲುಪಿದೆ. ಜನರು ಸಿರಿಧಾನ್ಯಗಳು ಜಗತ್ತಿನ ಪ್ರತಿ ಡೈನಿಂಗ್ ಟೇಬಲ್ ಅನ್ನೂ ಸೂಪರ್ ಫುಡ್ ಅಗಿ ತಲುಪುವಂತಾಗಬೇಕು ಎಂದು ಜನರು ಬಯಸಿದ್ದಾರೆ. ಅಡೆತಡೆಗಳನ್ನು ನಿವಾರಿಸುವ ಮೂಲಕ ನಾವು ಭಾರತವನ್ನು ಸಮೃದ್ಧವಾಗಿಸಬಹುದು. ವೋಕಲ್ ಫಾರ್ ಲೋಕಲ್ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಮಂತ್ರವಾಗಿರುವುದು ನನಗೆ ಖುಷಿ ನೀಡಿದೆ. ಪ್ರತಿ ಜಿಲ್ಲೆಯೂ ತಾನು ಉತ್ಪಾದಿಸುವ ವಸ್ತುವಿನ ಬಗ್ಗೆ ಹೆಮ್ಮೆಪಟ್ಟುಕೊಳ್ಳಲು ಆರಂಭಿಸಿವೆ. 'ಒಂದು ಜಿಲ್ಲೆ ಒಂದು ಉತ್ಪನ್ನ' ಎಂಬ ವಾತಾವರಣ ನಿರ್ಮಾಣವಾಗಿದೆ. ‘ವೋಕಲ್ ಫಾರ್ ಲೋಕಲ್’ ಆರ್ಥಿಕತೆಯ ಹೊಸ ಮಂತ್ರ. ಯೋಜನೆಯಿಂದ ಬುಡಕಟ್ಟು ಸಮುದಾಯಕ್ಕೆ ಲಾಭ ಆಗಿದೆ

ಈ ಹಿಂದೆಯೂ ದೇಶದ ಜನತೆ ಬದಲಾವಣೆ ಬಯಸಿದ್ದರು. ಆದರೆ, ಅವರ ಅಕಾಂಕ್ಷೆಗಳಿಗೆ ಕಿವಿಗೊಡುವವರು ಇರಲಿಲ್ಲ. ನಮ್ಮ ಸರ್ಕಾರ ತಳಮಟ್ಟದಲ್ಲಿ ಬಹು ದೊಡ್ಡ ಸುಧಾರಣೆಗಳನ್ನು ತಂದಿದೆ. ಸುಧಾರಣೆ ಕಡೆಗಿನ ನಮ್ಮ ಬದ್ಧತೆಗಳು ತಾತ್ಕಾಲಿಕಲ್ಲ. ಆದರೆ, ದೇಶವನ್ನು ಬಲಪಡಿಸುವ ಬದ್ಧತೆಯಾಗಿದೆ.

ಕೊರೊನಾ ಅವಧಿಯಲ್ಲಿ ಹೋರಾಡಿದ್ದನ್ನು ಮರೆಯಲು ಹೇಗೆ ಸಾಧ್ಯ? ಭಾರತ ಇಡೀ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಕೋಟಿಗಟ್ಟಲೆ ಜನರಿಗೆ ಲಸಿಕೆಗಳನ್ನು ನೀಡಿದೆ. ಭಯೋತ್ಪಾದಕರು ಬಂದು ನಮ್ಮ ಮೇಲೆ ದಾಳಿ ನಡೆಸುತ್ತಿದ್ದಂತಹ ದೇಶ ಇದು. ಭಾರತೀಯ ಸೇನೆ ಸರ್ಜಿಕಲ್ ಹಾಗೂ ಏರ್​​ ಸ್ಟ್ರೈಕ್​ ಮಾಡುವಷ್ಟು ಬೆಳೆದಿದೆ. ಬಾಹ್ಯಾಕಾಶ ಹಾಗೂ ಸೇನೆಯಲ್ಲಿ ಅಗಾಧ ಬದಲಾವಣೆ ತರಲಾಗಿದೆ. ಭಾರತೀಯ ಸೇನೆ ಉಗ್ರರ ತಾಣಗಳಿಗೆ ನುಗ್ಗಿ ಹೊಡೆಯುತ್ತೆ. ನಮಗೆ ದೇಶ ಮೊದಲು ಇದು ನಮ್ಮ ಸಂಕಲ್ಪ. ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೆ ಗೊತ್ತಿದೆ. ಸಶಸ್ತ್ರ ಪಡೆಗಳು ಸರ್ಜಿಕಲ್ ದಾಳಿಗಳನ್ನು ನಡೆಸಿದಾಗ, ವಾಯುದಾಳಿಗಳನ್ನು ಮಾಡಿದಾಗ ಯುವಜನರು ಹೆಮ್ಮೆಪಟ್ಟಿದ್ದರು. ಇದಕ್ಕಾಗಿಯೇ ದೇಶದ 140 ಕೋಟಿ ಜನತೆ ಹೆಮ್ಮೆಯಿಂದ ಇದ್ದಾರೆ.

ಡಿಜಿಟಲೀಕರಣದಿಂದ ಬ್ಯಾಂಕಿಂಗ್​ ಕ್ಷೇತ್ರಕ್ಕೆ ಹೊಸ ಬಲ ಬಂದಿದೆ,. ನಾವು ಆಯ್ದುಕೊಂಡ ಸುಧಾರಣೆ ಹಾದಿಯು ಪ್ರಗತಿಯ ನೀಲನಕ್ಷೆಯಾಗಿದೆ. ಬಡವರು, ಮಧ್ಯಮ ವರ್ಗ, ವಂಚಿತರು ಎಲ್ಲರಿಗೂ ತಳಮಟ್ಟದ ಸುಧಾರಣೆ ತಂದಿದ್ದೇವೆ. ನಮ್ಮ ಯುವಜನರ ಅಕಾಂಕ್ಷೆಗಾಗಿ ಅವರ ಜೀವನದಲ್ಲಿ ಸುಧಾರಣೆ ತರುವ ಹಾದಿ ಅಯ್ಕೆ ಮಾಡಿದ್ದೇವೆ. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಎಂಎಸ್‌ಎಂಇ, ಸಾರಿಗೆ, ಕೃಷಿ- ಹೀಗೆ ಪ್ರತಿ ವಲಯದಲ್ಲು ಹೊಸ ಆಧುನಿಕ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ತಂತ್ರಜ್ಞಾನದ ಸಮಗ್ರತೆಯ ಅತ್ಯುತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಈ ಹಿಂದೆ ಜನರು ಮೂಲ ಸೌಲಭ್ಯಗಳಿಗಾಗಿ ಸರ್ಕಾರವನ್ನು ಅಂಗಲಾಚಬೇಕಿತ್ತು. ಈಗ ಅವು ಅವರ ಮನೆಬಾಗಿಲಿಗೆ ಬರುತ್ತಿವೆ ಎಂದು ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries