ಇಂದು ಆಗಸದಲ್ಲಿ ಸೂಪರ್ ಮೂನ್ ಮತ್ತು ಬ್ಲೂ ಮೂನ್ ಕಾಣಬಹುದಾಗಿದೆ. ಇಂದು ರಾತ್ರಿಯಿಂದ ಮೂರು ದಿನಗಳ ಕಾಲ ಶುಭ್ರ ಆಕಾಶದಲ್ಲಿ ಈ ವಿದ್ಯಮಾನವನ್ನು ನೋಡಬಹುದು.
ಚಂದ್ರನು ಭೂಮಿಯ ಕಕ್ಷೆಗೆ ಹತ್ತಿರದಲ್ಲಿದ್ದಾಗ ಸೂಪರ್ ಮೂನ್ ಎನ್ನುತ್ತಾರೆ. ನೀಲಿ ಚಂದ್ರ ನಾಲ್ಕು ಹುಣ್ಣಿಮೆಗಳ ಅವಧಿಯಲ್ಲಿ ಮೂರನೇ ಹುಣ್ಣಿಮೆಯಾಗಿದೆ. ಇದು ಋತುವಿನ ಮೂರನೇ ಹುಣ್ಣಿಮೆಯಾಗಿದೆ. ಈ ಎರಡು ವೈಶಿಷ್ಟ್ಯಗಳು ಜೊತೆಯಾಗಿರುವುದು ವಿಶೇಷವಾಗಿದ್ದು, ಸೂಪರ್‍ಮೂನ್ ಅನ್ನು ಬ್ಲೂ ಮೂನ್ ವಿದ್ಯಮಾನ ಎಂದು ಕರೆಯಲಾಗುತ್ತದೆ.
ನಾಸಾ ಪ್ರಕಾರ, ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ನೀಲಿ ಚಂದ್ರ ಕಾಣಿಸಿಕೊಳ್ಳುತ್ತದೆ. ಅಕ್ಟೋಬರ್ 2020 ಮತ್ತು ಆಗಸ್ಟ್ 2021 ರಲ್ಲಿ ನೀಲಿ ಚಂದ್ರಗಳು ಕಾಣಿಸಿದ್ದವು. ಮುಂದಿನ ಬ್ಲೂ ಮೂನ್ ಮೇ 2027 ರಲ್ಲಿ ಸಂಭವಿಸುತ್ತದೆ. ಸೂಪರ್ ಮೂನ್‍ಗಳು ಮತ್ತು ಕಾಲೋಚಿತ ನೀಲಿ ಚಂದ್ರಗಳು ಸಾಮಾನ್ಯವಾಗಿದ್ದರೂ, ಎರಡೂ ವಿದ್ಯಮಾನಗಳು ಜೊತೆಯಾಗುವುದು ಅಪರೂಪ. ಈ ವಿದ್ಯಮಾನವು 10 ಮತ್ತು 20 ವರ್ಷಗಳ ನಡುವೆ ಸಂಭವಿಸುತ್ತದೆ. ಮುಂದಿನ ಸೂಪರ್‍ಮೂನ್ ಜನವರಿ 2037 ರಲ್ಲಿ ಕಾಣಿಸಲಿದೆಯಂತೆ.
ಒಂದು ತಿಂಗಳಲ್ಲಿ ಎರಡನೇ ಹುಣ್ಣಿಮೆಯನ್ನು ತಿಂಗಳ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ನೀಲಿ ಚಂದ್ರನಿಗೆ ನೀಲಿ ಬಣ್ಣಕ್ಕೂ ಸಂಬಂಧವಿಲ್ಲ. ಅಪರೂಪದ ಸಂದರ್ಭಗಳಲ್ಲಿ ಚಂದ್ರನು ನೀಲಿ ಬಣ್ಣದಲ್ಲಿ ಕಾಣುತ್ತಾನೆ. ಇಂದಿನ ಸೂಪರ್, ಬ್ಲೂ ಮೂನ್ ನೀಲಿ ಬಣ್ಣದ್ದಾಗಿರುವುದಿಲ್ಲ. ಇದು ಸಾಮಾನ್ಯ ಚಂದ್ರನಿಗಿಂತ ಶೇಕಡಾ 30 ರಷ್ಟು ಪ್ರಕಾಶಮಾನವಾಗಿ ಮತ್ತು ಶೇಕಡಾ 14 ರಷ್ಟು ದೊಡ್ಡದಾಗಿ ಕಾಣಿಸುತ್ತದೆ. ಸೂಪರ್‍ಮೂನ್ ಎಂಬ ಪದವನ್ನು ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಅವರು 1979 ರಲ್ಲಿ ಸೃಷ್ಟಿಸಿದ್ದರು.