HEALTH TIPS

ಹವಾಮಾನ ಬದಲಾವಣೆಯಿಂದ ಅಮೆಜಾನ್ ಕಾಡುಗಳಲ್ಲಿ ಕಾಡ್ಗಿಚ್ಚು 20 ಪಟ್ಟು ಹೆಚ್ಚಳ! ವರದಿ

          ವದೆಹಲಿ: ಮಾನವ ನಿರ್ಮಿತ ಕಾರಣಗಳಿಂದ ಉಂಟಾಗಿರುವ ಜಾಗತಿಕ ಹವಾಮಾನ ಬದಲಾವಣೆ ಅಮೆಜಾನ್ ಕಾಡುಗಳಲ್ಲಿ ಬರೋಬ್ಬರಿ 20 ಪಟ್ಟು ಹೆಚ್ಚು ಕಾಡ್ಚಿಚ್ಚುಗಳು ಉಂಟಾಗಲು ಕಾರಣವಾಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

          Earth System Science Data ಜರ್ನಲ್‌ನಲ್ಲಿ ಪ್ರಕಟವಾಗಿರುವ The State of Wildfires report ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

        2023ರ ಮಾರ್ಚ್‌ನಿಂದ 2024ರ ಫೆಬ್ರುವರಿವರೆಗೆ ಅಮೆಜಾನ್, ಕೆನಡಾ, ಗ್ರೀಸ್, ಹವಾಯಿ, ಚೀಲಿ ಕಾಡುಗಳಲ್ಲಿ ಉಂಟಾದ ಭೀಕರ ಕಾಡ್ಗಿಚ್ಚುಗಳನ್ನು ವಿವರವಾಗಿ ಅಧ್ಯಯನ ಮಾಡಿ ಹಲವಾರು ಆತಂಕಕಾರಿ ಸಂಗತಿಗಳನ್ನು ಈ ಅಧ್ಯಯನ ವರದಿಯಿಂದ ಕಂಡುಕೊಳ್ಳಲಾಗಿದೆ.

          ಹವಾಮಾನ ಬದಲಾವಣೆಯಿಂದ ಕೆನಡಾ ಹಾಗೂ ಗ್ರೀಸ್‌ನಲ್ಲಿ ಒಂದು ವರ್ಷದಲ್ಲಿ ಮೂರು ಬಾರಿ ಕಾಡ್ಗಿಚ್ಚುಗಳು ಸಂಭವಿಸಿವೆ. ಇದು ಹಿಂದಿನ ಕಾಡ್ಚಿಚ್ಚುಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಎಂದು ಹೇಳಿದೆ.

             ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಕಾಡ್ಗಿಚ್ಚುಗಳಿಂದ ಭೂಮಿಯ ಮೇಲೆ ಇಂಗಾಲದ ಹೊರಸೂಸುವಿಕೆಯೂ ಸರಾಸರಿಗಿಂತ ಶೇ 16 ರಷ್ಟು ಹೆಚ್ಚಾಗಿದೆ ಎಂದು ಬ್ರಿಟನ್ ಮತ್ತು ಬ್ರೆಜಿಲ್‌ನ ಸಂಶೋಧಕರನ್ನು ಒಳಗೊಂಡಿರುವ ಅಧ್ಯಯನ ತಂಡ ಹೇಳಿದೆ.

           ಅಮೆಜಾನ್‌ ವಲಯದಲ್ಲಿ ಗಾಳಿಯ ಗುಣಮಟ್ಟ ತುಂಬಾ ಕೆಟ್ಟದಾಗುತ್ತಿದೆ. ಅಮೆಜಾನ್ ಹಾಗೂ ಕೆನಡಾ ಕಾಡುಗಳಲ್ಲಿ ಉಂಟಾಗುತ್ತಿರುವ ಕಾಡ್ಗಿಚ್ಚುಗಳಿಂದ ಭೂಮಿಯ ಹವಾಮಾನದ ಮೇಲೆ ಶಾಶ್ವತವಾದ ಪರಿಣಾಮ ಉಂಟಾಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

            ತಾಪಮಾನದ ಹೆಚ್ಚಳದಿಂದ ಕಾಡ್ಗಿಚ್ಚುಗಳು ಸಂಭವಿಸುವುದು ಸಹ ಹೆಚ್ಚಳವಾಗುತ್ತಿದೆ. ಇದು ಪರಿಸರ ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ‍ಪರಿಣಾಮವನ್ನುಂಟುಮಾಡುತ್ತಿದೆ ಎಂದು ಹೇಳಿದೆ.

ಅಮೆಜಾನ್ ವಲಯದಲ್ಲಿನ ಕೃಷಿ ಚಟುವಟಿಕೆಗಳ ವಿಸ್ತರಣೆಯೂ ಸಹ ಕಾಡ್ಗಿಚ್ಚುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries