ಪೆರ್ಲ : ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಬ್ರಹ್ಮಶ್ರೀನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮ ಆ. 20ರಂದು ಪೆರ್ಲ ವ್ಯಾಪಾರ ಭವನದಲ್ಲಿ ನಡೆಯಲಿದೆ. ಬೆಳಗ್ಗೆ 10ರಿಂದ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಮಹಿಳಾ ಸಮಿತಿ ಸದಸ್ಯೆಯರಿಂದ ಭಜನೆ ನಡೆಯುವುದು.
ಸಂಘದ ಅಧ್ಯಕ್ಷ ಬಿ.ಪಿ ಶೇಣಿ ಅಧ್ಯಕ್ಷತೆ ವಹಿಸುವರು. ಸಾಹಿತಿ, ಕುಕ್ಕಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಮೊಕ್ತೇಸರ ಎಂ.ಕೆ ಕುಕ್ಕಾಜೆ ದಿಕ್ಸೂಚಿ ಭಾಷಣ ಮಾಡುವರು. ನಿವೃತ್ತ ಪ್ರಾಂಶುಪಾಲ ಡಿ. ಸುನಿತ್‍ಕುಮಾರ್, ನಿವೃತ್ತ ಶಿಕ್ಷಕ, ಸಂಘದ ನಿಕಟಪೂರ್ವ ಅಧ್ಯಕ್ಷ ಶಿವಪ್ಪ ಪೂಜಾರಿ, ಎಣ್ಮಕಜೆ ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ವಾಣೀನಗರ, ಗ್ರಾಪಂ ಮಾಜಿ ಸದಸ್ಯ ಚನಿಯಪ್ಪ ಪೂಜಾರಿ ಅಲಾರ್, ಬಿಲ್ಲವ ಸೇವಾ ಸಂಘ ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಉಪಸ್ಥಿತರಿರುವರು. ಈ ಸಂದರ್ಭ ಹಿರಿಯ ನಾಟಿ ವೈದ್ಯೆ ಪೊನ್ನಪ್ಪೆ ಖಂಡಿಗೆ ಹಾಗೂ ಯಶಸ್ವೀ ಮಹಿಳಾ ಉದ್ಯಮಿ ಯಶೋದಾ ಕಾನ ಅವರನ್ನು ಸನ್ಮಾನಿಸಲಾಗುವುದು. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2023ನೇ ಸಾಲಿನ ಎಸ್ಸೆಸೆಲ್ಸಿ, ಪ್ಲಸ್‍ಟು ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗುವುದು.