ಕಾಸರಗೋಡು: ನಗರದ ಎಸ್.ವಿ.ಟಿ ರಸ್ತೆ ಪೇಟೆ ಶ್ರೀ ಪೇಟೆ ವೆಂಕಟ್ರಮಣ ದೇವಸ್ಥಾನ ಹಾಗೂ ಶ್ರೀ ಗುರುರಾಘವೇಂದ್ರ ಸ್ವಾಮಿ ವೃಂದಾವನ ಸೇವಾ ಸಮಿತಿ ವತಿಯಿಂದ ಸಂಪೂಜ್ಯ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಪುಣ್ಯತಿಥಿ, ಆರಾಧನಾ ಮಹೋತ್ಸವ ಆ. 21ರಂದು ಜರುಗಲಿರುವುದು.
ಅಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, ಪಂಚಾಮೃತಾಬಿಷೇಕ ಹಾಗೂ ವಿವಿಧ ಸೇವೆಗಳು, ಭಜನೆ ನಡೆಯುವುದು. 10ರಿಂದ ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಅವರ ಶಿಷ್ಯಂದಿರಾದ ವಿದುಷಿ ಮಂಜುಳಾ ಮೃಣಾಳಿನಿ ಮತ್ತು ವಿದ್ವಾನ್ ಎಲ್. ಅನಂತಪದ್ಮನಾಭ ಅವರಿಂದ ದ್ವಂದ್ವ ಪಿಟೀಲು ವಾದನ ನಡೆಯುವುದು. ಮಧ್ಯಹ್ನ 1.30ರಿಂದ ಮಧೂರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 7.45ಕ್ಕೆ ಶ್ರೀವೆಂಕಟ್ರಮಣ ದೇವರಿಗೆ ವಿಶೇಷ ಪೂಜೆ, ವಿಶೇಷ ಹೂವಿನ ಪೂಜೆ, ರಂಗಪೂಜೆ ನಡೆಯಲಿರುವುದು.