ಉಪ್ಪಳ: ತುಳುನಾಡಿನ ಭೂಮಿಪತ್ರರಾದ ಮೊಗೇರರ ದೈವಾರಾಧನೆ ಮತ್ತು ಆಚರಣೆಗಳು ಮೂಲಸ್ವರೂಪವನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸೆಪ್ಟಂಬರ್ 22ರಂದು ಪಚ್ಲಂಪಾರೆಯಲ್ಲಿ ಸಮಾಲೋಚನಾ ಸಭೆ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಂಕಾಳಿ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈವಾರಾಧಕರ ಒಕ್ಕೂಟದ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು.ಒಕ್ಕೂಟದ ಪ್ರಧಾನ ಸಂಚಾಲಕ ಬಾಬು ಯು ಪಚ್ಲಂಪಾರೆ ಪ್ರಾರ್ಥನೆ ಸಲ್ಲಿಸಿ ದೈವಾರಾಧಕರಿಗೆ ಆಮಂತ್ರಣಪತ್ರಿಕೆಯನ್ನು ನೀಡುವ ಮೂಲಕ ಬಿಡುಗಡೆಗೊಳಿಸಿದರು. ಗೌರವಾಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶಂಕರ ದರ್ಭೆತ್ತಡ್ಕ, ಒಕ್ಕೂಟದ ಪದಾಧಿಕಾರಿಗಳಾದ ಹರಿರಾಮ ಕುಳೂರು, ಚಂದಪ್ಪ ಕಕ್ವೆ, ರವಿ ಕನಕಪ್ಪಾಡಿ, ಸುಧಾಕರ ಬೆಳ್ಳಿಗೆ, ಸುಂದರ ಕನಿಯಾಲ, ರಾಜೇಶ್ ಕುಳಮರ್ವ ಶುಭಹಾರೈಸಿದರು. ಒಕ್ಕೂಟದ ಪದಾಧಿಕಾರಿ ಗೋಪಾಲ ದರ್ಭೆತ್ತಡ್ಕ ನಿರೂಪಿಸಿದರು. ಸತೀಶ್, ನಾರಾಯಣ ಕೆ.ವಿ., ಸುರೇಶ್, ಕೃಷ್ಣ, ಗುರುವಪ್ಪ, ಭಾರತಿ, ಭಾಗೀರಥಿ, ಸುಭದ್ರ ಉಪಸ್ಥಿತರಿದ್ದರು.