ಕಾಸರಗೋಡು : ಜಿಲ್ಲಾ ಅರಣ್ಯ ಮತ್ತು ವನ್ಯಜೀವಿ ಇಲಾಖೆಯಲ್ಲಿ ಬೀಟ್ ಫಾರೆಸ್ಟ್ ಆಫೀಸರ್ (ಪ್ರವರ್ಗ ಸಂಖ್ಯೆ:227/2023) (ಓಅಂ - ಔಃಅ) ಹುದ್ದೆಯ 2024 ಜೂನ್ 22ರಂದು ಪ್ರಕಟಿಸಿದ ಶಾರ್ಟ್ ಲಿಸ್ಟ್ ನಲ್ಲಿ ಒಳಗೊಂಡ ಪುರುಷ ಉದ್ಯೋಗಾರ್ಥಿಗಳಿಗೆ ಆಗಸ್ಟ್ 13 ರಂದು ಹಾಗೂ ಮಹಿಳಾ ಅಭ್ಯರ್ಥಿ ಗಳಿಗೆ ಆಗಸ್ಟ್ 14ರಂದು ಬೆಳಿಗ್ಗೆ 5ಕ್ಕೆ ಪಾಲಕ್ಕಾಡ್ ಮಲಂಬುಳ ರಾಕ್ ಗಾರ್ಡನ್ ಬಳಿಯ ವಾಳಯಾರ್ ರೇಂಜ್ ಫಾರೆಸ್ಟ್ ಆಫೀಸರ್‍ನ ಕಛೇರಿಯಲ್ಲಿ ಪರೀಕ್ಷೆ ನಡೆಸಲಾಗುವುದು.
ನಿಗದಿತ ಸಮಯ ಮತ್ತು ದಿನಾಂಕದ ನಂತರ ಬರುವವರನ್ನು ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. ಅಭ್ಯರ್ಥಿಗಳಿಗಿರುವ ಪೆÇ್ರಫೈಲ್ ಸಂದೇಶ, ಫೆÇೀನ್ ಸಂದೇಶಗಳನ್ನು ಈಗಾಗಲೇ ನೀಡಲಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230102)ಸಂಪರ್ಕಿಸುವಂತೆ ಕೇರಳ ಪಿಎಸ್‍ಸಿಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.