HEALTH TIPS

ನಾಳೆಯಿಂದ ಕೇರಳ ರಾಜ್ಯ ಕೃಷಿ ಕೂಲಿಕಾರ್ಮಿಕ ಸಂಘದ 23ನೇ ಕೇರಳ ರಾಜ್ಯ ಸಮ್ಮೇಳನ

               ಕಾಸರಗೋಡು: ಕೇರಳ ರಾಜ್ಯ ಕೃಷಿ ಕೂಲಿಕಾರ್ಮಿಕ ಸಂಘದ 23ನೇ ಕೇರಳ ರಾಜ್ಯ ಸಮ್ಮೇಳನ ಆ. 20ರಿಂದ 22ರ ವರೆಗೆ  ಚೆರುವತ್ತೂರು ಕೊಡಕ್ಕಾಡಿನ ಬ್ಯಾಂಕ್ ಆಡಿಟೋರಿಯಂನಲ್ಲಿ ಸಿದ್ಧಪಡಿಸಲಾದ'ಕೆ.ಕುಞÂರಾಮನ್ ನಗರ'ದಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

               ರಾಜ್ಯದ 14 ಜಿಲ್ಲೆಗಳಿಂದ ಆಯ್ಕೆಯಾದ 512 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದ ಅಂಗವಾಗಿ ಆ. 11ರಂದು ಕಾಸರಗೋಡು ಜಿಲ್ಲೆಯ 1453 ಘಟಕಗಳಲ್ಲಿ ಧ್ವಜ ದಿನಾಚರಣೆಯನ್ನು ಆಚರಿಸಲಾಗಿದ್ದು, ಘಟಕಗಳು ಹಾಗೂ ಸಂಘಟನಾ ಸಮಿತಿ ನೇತೃತ್ವದಲ್ಲಿ ವ್ಯಾಪಕ ಪ್ರಚಾರ ಕಾರ್ಯಗಳು ನಡೆಯುತ್ತಿವೆ. 20ರಂದು ಬೆಳಗ್ಗೆ 7.30ಕ್ಕೆ ಸಮ್ಮೇಳನದ ನಗರಿ ಕೆ ಕುಞÂರಾಮನ್ ನಗರದಲ್ಲಿ ಅಳವಡಿಸಲಿರುವ ಧ್ವಜದ ಮೆರವಣಿಗೆ ವೀರ ಕಯ್ಯೂರು ಹುತಾತ್ಮರ ಸ್ಮೃತಿ ಮಂಟಪದಿಂದ ಆರಂಭಗೊಳ್ಳುವುದು.     ಮಾಜಿ ಸಂಸದ ಪಿ.ಕರುಣಾಕರನ್ ಅವರು ಸಂಘಟನೆ ಕಾರ್ಯದರ್ಶಿ ಕೆ.ವಿ ಕುಞÂರಾಮನ್ ಅವರಿಗೆ ಧ್ವಜ ಹಸ್ತಾಂತರಿಸಲಿದ್ದಾರೆ. 

            ಸಮ್ಮೇಳನದ ನಗರದಲ್ಲಿ ಬೆಳಗ್ಗೆ 9.30ಕ್ಕೆ ಸಂಘಟನೆ ರಾಜ್ಯಾಧ್ಯಕ್ಷ ಎನ್.ಆರ್.ಬಾಲನ್ ಧ್ವಜಾರೋಹಣ ನಡೆಸುವರು.  ನಂತರ ಪ್ರತಿನಿಧಿ ಸಮ್ಮೇಳನ ಅಖಿಲ ಭಾರತ ಅಧ್ಯಕ್ಷ ಎ ವಿಜಯರಾಘವನ್ ಉದ್ಘಾಟಿಸುವರು.  ಗುಂಪು ಚರ್ಚೆಯ ನಂತರ, ನಿಯೋಗವು ಸಂಜೆ 4.30 ಕ್ಕೆ ಕಯ್ಯೂರು ಹುತಾತ್ಮರ ಮಂಟಪಕ್ಕೆ ಮತ್ತು ಸಂಜೆ 5ಕ್ಕೆ ಕಯ್ಯೂರ್ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಲಿದೆ. ರಕ್ತಸಾಕ್ಷಿ ಸ್ಮೃತಿ ಸಂಗಮವನ್ನು ಒಕ್ಕೂಟದ ಅಖಿಲ ಭಾರತ ಉಪಾಧ್ಯಕ್ಷ ಎಂ.ವಿ.ಗೋವಿಂದನ್‍ಉದ್ಘಾಟಿಸಲಿದ್ದಾರೆ. 21ರಂದು ಸಾರ್ವಜನಿಕ ಚರ್ಚೆ ಹಾಗೂ 22ರಂದು ನೂತನ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆಯೊಂದಿಗೆ ಸಮ್ಮೇಳನ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

            ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಚಂದ್ರನ್, ಪ್ರಧಾನ ಸಂಚಾಲಕ ವಿ.ಕೆ.ರಾಜನ್, ಕೆಎಸ್‍ಕೆಟಿಯು ಜಿಲ್ಲಾ ಕಾರ್ಯದರ್ಶಿ ಕೆ.ವಿ.ಕುಞÂರಾಮನ್ ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries