HEALTH TIPS

23ರಂದು ಉಕ್ರೇನ್‌ಗೆ ಮೋದಿ ಮಹತ್ವದ ಭೇಟಿ

          ವದೆಹಲಿ: ಉಕ್ರೇನ್ ರಾಜಧಾನಿ ಕೀವ್‌ಗೆ ಕೈಗೊಂಡಿರುವ ತಮ್ಮ ಮಹತ್ವದ ಭೇಟಿಗೆ ಎರಡು ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು 'ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಎದುರು ನೋಡುತ್ತಿರುವೆ' ಎಂದು ಬುಧವಾರ ಹೇಳಿದ್ದಾರೆ.

         ಸದ್ಯ ಪೋಲೆಂಡ್‌ ಭೇಟಿಯಲ್ಲಿರುವ ಮೋದಿ ಅವರು, ಇದೇ 23ರಂದು ಕೀವ್‌ಗೆ ಭೇಟಿ ಕೊಡಲಿದ್ದಾರೆ. ಅಂದು ಸುಮಾರು ಏಳು ತಾಸು ಅವರು ಕೀವ್‌ನಲ್ಲಿ ಇರಲಿದ್ದಾರೆ. ಪೋಲೆಂಡ್‌ನಿಂದ ಕೀವ್‌ಗೆ 'ರೈಲ್ ಫೋರ್ಸ್ ಒನ್' ರೈಲಿನಲ್ಲಿ ಮೋದಿ ಅವರು ಹೋಗಿ ಬರಲಿದ್ದಾರೆ. ಎರಡೂ ಕಡೆಯ ಪ್ರಯಾಣ ಅವಧಿ ಒಟ್ಟು 20 ತಾಸು ಆಗಲಿದೆ. 1991ರಲ್ಲಿ ಉಕ್ರೇನ್‌ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.

            ಉಕ್ರೇನ್‌ ಸಂಘರ್ಷ ಉಲ್ಲೇಖಿಸಿರುವ ಮೋದಿ ಅವರು, 'ಸ್ನೇಹಿತ ಮತ್ತು ಪಾಲುದಾರನಾಗಿ ಭಾರತವು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯು ಮೊದಲಿನ ಸ್ಥಿತಿಗೆ ಆದಷ್ಟು ಶೀಘ್ರ ಮರಳುವಿಕೆಯನ್ನು ಆಶಿಸುತ್ತದೆ' ಎಂದು ಹೇಳಿದ್ದಾರೆ.


          'ದ್ವಿಪಕ್ಷೀಯ ಸಹಕಾರ ಬಲಪಡಿಸಲು ಮತ್ತು ಸದ್ಯದ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಬಗ್ಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಅವಕಾಶವನ್ನು ಎದುರು ನೋಡುತ್ತಿದ್ದೇನೆ' ಎಂದು ಅವರು ಹೇಳಿದರು.

             ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಈವರೆಗೂ ಖಂಡಿಸಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಪರಿಹರಿಸಲು ಉಭಯ ರಾಷ್ಟ್ರಗಳನ್ನು ಭಾರತ ಒತ್ತಾಯಿಸುತ್ತಲೇ ಬಂದಿದೆ.

ಪೋಲೆಂಡ್‌ ರಾಜಧಾನಿ ವಾಸಾದ ವಿಮಾನ ನಿಲ್ದಾಣಕ್ಕೆ ಬುಧವಾರ ಬಂದಿಳಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries