HEALTH TIPS

ಭೂಮಿಯಿಂದ ದೂರವಾಗುತ್ತಿರುವ ಚಂದ್ರ: ಇನ್ಮುಂದೆ ದಿನಕ್ಕೆ 24 ಗಂಟೆ ಬದಲಾಗಿ 25 ಗಂಟೆ!?

  ಇತ್ತೀಚೆಗೆ ಚಂದ್ರನ ಮೂಲದ ಬಗ್ಗೆ ಸಂಶೋಧಕರು ಹೊಸ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎನ್ನುವ ಕುತೂಹಲದ ಅಂಶವೊಂದು ಬೆಂಕಿಗೆ ಬಂದಿದೆ. ಹೌದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಮಾಡಿರುವ ಅಧ್ಯಯನದಿಂದ ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎಂದು ಹೇಳಿದೆ.

ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದರದಲ್ಲಿ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಅಧ್ಯಯನ ಹೇಳಿದೆ. ಇದರಿಂದ ಆಗುವ ಪರಿಣಾಮ ಏನೆಂದರೆ, ಭೂಮಿಯಲ್ಲಿ ಇರುವ ಒಂದು ದಿನದ ಸಮಯದಲ್ಲಿ ಇದು ಬದಲಾವಣೆ ಆಗುತ್ತದೆ. ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ. ನಿಮಗೆ ನೆನಪಿರಲಿ, 1.4 ಶತಕೋಟಿ ವರ್ಷಗಳ ಹಿಂದೆ, ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳ ಕಾಲ ಇತ್ತು ಎಂದು ಅಧ್ಯಯನವು ಹೇಳಿದೆ.

ಈ ವಿದ್ಯಮಾನವು ಪ್ರಾಥಮಿಕವಾಗಿ ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಗಳಿಗೆ ಕಾರಣವಾಗಿದೆ, ನಿರ್ದಿಷ್ಟವಾಗಿ ಎರಡೂ ಗ್ರಹಗಳಿಂದ ಉಂಟಾಗುವ ಉಬ್ಬರವಿಳಿತದ ಶಕ್ತಿಗಳಿಂದ ಇದು ಉಂಟಾಗಲಿದೆ. "ಚಂದ್ರನು ದೂರ ಸರಿಯುತ್ತಿದ್ದಂತೆ, ಭೂಮಿಯು ತಿರುಗುವ ಫಿಗರ್ ಸ್ಕೇಟರ್‌ನಂತಿದೆ, ಅವರು ತಮ್ಮ ತೋಳುಗಳನ್ನು ಚಾಚಿದಂತೆ ನಿಧಾನಗೊಳಿಸುತ್ತದೆ" ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಭೂವಿಜ್ಞಾನದ ಪ್ರಾಧ್ಯಾಪಕ ಸ್ಟೀಫನ್ ಮೇಯರ್ಸ್ ಹೇಳಿದರು.

ಭೂಮಿಯಿಂದ ಸುಮಾರು 3,84,400 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಚಂದ್ರನು ಭೂಮಿಯ ನೈಸರ್ಗಿಕ ಉಪಗ್ರಹ ಮತ್ತು ಭೂಮಿಯ ಏಕೈಕ ಉಪಗ್ರಹ. ರಾತ್ರಿ ಹೊತ್ತು ನಮಗೆಲ್ಲಾ ಬೆಳಕು ನೀಡುವ ಚಂದ್ರನ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಅದರಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಚಂದ್ರನ ಮೂಲವು ಸುಮಾರು ನಾಲ್ಕೈದು ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ್ದು, ಮಂಗಳನಂತಹ ವಸ್ತುವು ಭೂಮಿಗೆ ಡಿಕ್ಕಿ ಹೊಡೆದ ನಂತರ ಈ ತುಣುಕುಗಳಿಂದ ಚಂದ್ರನು ರೂಪುಗೊಂಡನು ಎನ್ನಲಾಗಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries