ಕೋಲ್ಕತ್ತ: ಭೀಕರ ಭೂಕುಸಿತಕ್ಕೆ ತುತ್ತಾಗಿರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ ರಾಜ್ಯದ 242 ವಲಸೆ ಕಾರ್ಮಿಕರು ಸಿಲುಕಿದ್ದಾರೆ ಎಂದು ಪಶ್ಚಿಮ ಬಂಗಾಳ ಕಾರ್ಮಿಕ ಸಚಿವ ಮೊಲೊಯ್ ಘಾಟಕ್ ವಿಧಾನಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
ಕೋಲ್ಕತ್ತ: ಭೀಕರ ಭೂಕುಸಿತಕ್ಕೆ ತುತ್ತಾಗಿರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ ರಾಜ್ಯದ 242 ವಲಸೆ ಕಾರ್ಮಿಕರು ಸಿಲುಕಿದ್ದಾರೆ ಎಂದು ಪಶ್ಚಿಮ ಬಂಗಾಳ ಕಾರ್ಮಿಕ ಸಚಿವ ಮೊಲೊಯ್ ಘಾಟಕ್ ವಿಧಾನಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
'242 ವಲಸೆ ಕಾರ್ಮಿಕರಲ್ಲಿ, ಸುಮಾರು 155 ಜನರೊಂದಿಗೆ ಸಂಪರ್ಕವನ್ನು ಸಾಧಿಸಿದ್ದು, ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ' ಎಂದು ಮೊಲೊಯ್ ಘಾಟಕ್ ಹೇಳಿದರು.
ಭೂಕುಸಿತದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದ ಜಲಪಾಯಿಗುರಿ, ಅಲಿಪುರ್ದೂರ್, ಡಾರ್ಜಿಲಿಂಗ್, ಪಶ್ಚಿಮ ಮೇದಿನಿಪುರ್, ಮುರ್ಷಿದಾಬಾದ್ ಮತ್ತು ಬಿರ್ಭುಮ್ ಜಿಲ್ಲೆಯವರು ಎಂದರು.
ಕಾರ್ಮಿಕರು ರಾಜ್ಯಕ್ಕೆ ಹಿಂದಿರುಗಲು ಬಯಸಿದರೆ, ಸರ್ಕಾರವು ಅವರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳುವುದು ಎಂದು ಸಚಿವರು ಹೇಳಿದರು.
ಪಶ್ಚಿಮ ಬಂಗಾಳದಿಂದ ಒಟ್ಟು 21,59,737 ವಲಸೆ ಕಾರ್ಮಿಕರು ದೇಶದ ವಿವಿಧ ರಾಜ್ಯಗಳಿಗೆ ಹೋಗಿದ್ದು, ಅವರಲ್ಲಿ 3,65,123 ಜನರು ಕೇರಳದ ವಿವಿಧ ಪ್ರದೇಶಗಳಲ್ಲಿ ಇದ್ದಾರೆ.