HEALTH TIPS

ಬಾಂಗ್ಲಾ | ಹಿಂಸೆಗಿಲ್ಲ ಅಂಕುಶ: ಹೋಟೆಲ್‌ಗೆ ಬೆಂಕಿ- 24 ಮಂದಿ ಸಜೀವ ದಹನ

         ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಬಾಂಗ್ಲಾದೇಶ ತೊರೆದ ಬಳಿಕವೂ ಢಾಕಾ, ಇತರ ನಗರಗಳಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

         ಶೇಖ್‌ ಹಸೀನಾ ನೇತೃತ್ವದ ಪಕ್ಷ ಅವಾಮಿ ಲೀಗ್‌ನ ಮುಖಂಡರೊಬ್ಬರ ಒಡೆತನದ ಐಷಾರಾಮಿ ಹೋಟೆಲ್‌ಗೆ ನುಗ್ಗಿದ ಉದ್ರಿಕ್ತರ ಗುಂಪೊಂದು, ಇಂಡೊನೇಷ್ಯಾ ಪ್ರಜೆ ಸೇರಿದಂತೆ ಕನಿಷ್ಠ 24 ಜನರನ್ನು ಸಜೀವ ದಹನ ಮಾಡಿದೆ ಎಂದು ಮೂಲಗಳು ಮಂಗಳವಾರ ಹೇಳಿವೆ.

          ಅವಾಮಿ ಲೀಗ್‌ ಪಕ್ಷದ ಜೋಷರ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಾಹಿನ್‌ ಚಕ್ಲಾದರ್ ಮಾಲೀಕತ್ವದ 'ಜಬೀರ್‌ ಇಂಟರ್‌
         ನ್ಯಾಷನಲ್‌ ಹೋಟೆಲ್‌'ಗೆ ಸೋಮವಾರ ತಡರಾತ್ರಿ ನುಗ್ಗಿದ್ದ ಗುಂಪು, ಹೋಟೆಲ್‌ಗೆ ಬೆಂಕಿ ಹಚ್ಚಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

             ಸರ್ಕಾರದ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಶೇಖ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸೋಮವಾರ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

          ರಾಜಧಾನಿ ಢಾಕಾದಲ್ಲಿ ಹಿಂಸಾಚಾರ ಮತ್ತು ದಾಳಿಯಿಂದಾಗಿ 119 ಮಂದಿ ಮೃತಪಟ್ಟಿದ್ದರೆ, ದೇಶದ ಇತರ ಭಾಗಗಳಲ್ಲಿ ಸಂಭವಿಸಿದ ಘರ್ಷಣೆಗಳಲ್ಲಿ 109 ಮಂದಿ ಮೃತಪಟ್ಟಿದ್ದಾರೆ.

           ಉದ್ಯೋಗದಲ್ಲಿ ಮೀಸಲಾತಿ ನೀತಿ ವಿರೋಧಿಸಿ ಜುಲೈ ಮೊದಲ ವಾರ ಪ್ರತಿಭಟನೆ ಆರಂಭಗೊಂಡಿತು. ಅಂದಿನಿಂದ ಸೋಮವಾರದವರೆಗಿನ 21 ದಿನಗಳಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 440ಕ್ಕೆ ಏರಿದಂತಾಗಿದೆ' ಎಂದು ಮಾಧ್ಯಮಗಳು ವರದಿ ಮಾಡಿವೆ.

             ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ರಾತ್ರಿ ನೇಮಕ ಮಾಡಿದ್ದಾರೆ ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಶಹಾಬುದ್ದೀನ್ ಅವರು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಯೋಜಕರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries