ಕಾಸರಗೋಡು: ಆರ್ಯ ಯಾನೆ ಮರಾಠ ಸಂಘ ಮಂಗಳೂರು-ಕಾಸರಗೋಡು, ಆರ್ಯ ಸಮುದಾಯ ಸಂಘ ಕಾಸರಗೋಡು ವಲಯ ಸಮಾವೇಶ ಆ.25 ರಂದು ಪಿಲಿಕುಂಜೆಯ ಶ್ರೀ ಭಗವತಿ ಸಭಾ ಭವನದಲ್ಲಿ ಆ.25 ರಂದು ಬೆಳಗ್ಗೆ 9.30 ರಿಂದ ನಡೆಯಲಿದೆ. ಹಿರಿಯರಿಂದ ದೀಪ ಬೆಳಗಿಸಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 10 ರಿಂದ ಆಟೋಟ ಸ್ಪರ್ಧೆ, ಮಧ್ಯಾಹ್ನ 2ರಿಂದ ಸಾಂಸ್ಕøತಿಕ ಕಾರ್ಯಕ್ರಮ, 3.30 ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಗೌರವಾಧ್ಯಕ್ಷೆ ಪ್ರೇಮಲತಾ ವೈ ರಾವ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಅಧ್ಯಕ್ಷ ಮೋಹನ ರಾವ್ ಬೊಂಸ್ಲೇ, ಆರ್ಯ ಸಮುದಾಯ ಸಂಘ ಕಾಸರಗೋಡು ಅಧ್ಯಕ್ಷ ಗಿರಿಧರ ರಾವ್ ವಾಗ್ಮನ್ ಚೊಟ್ಟೆ ಕುಂಡಂಗೋಳಿ, ಆರ್ಯ ಯಾನೆ ಮರಾಠ ಸಮಾಜ ಸಂಘ ಕಾಸರಗೋಡು, ಮಂಗಳೂರು ಕಾರ್ಯದರ್ಶಿ ನಿಖಿಲ್ ಚೌದವ್ ಜಲ್ಲಿಗುಡ್ಡೆ ಭಾಗವಹಿಸುವರು. ಕಾಸರಗೋಡು ವಲಯದ ಸಮಾಜ ಸಂಘಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ, ಸಾಧಕರಿಗೆ ಸಮ್ಮಾನ, ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಆರ್ಯ ಯಾನೆ ಮರಾಠ ಸಮಾಜ ಸಂಘ ಕಾಸರಗೋಡು-ಮಂಗಳೂರು ಮಾಜಿ ಅಧ್ಯಕ್ಷ ವಾಮನ ರಾವ್ ವಾಗ್ಮಾನ್ ಮುಳ್ಳಂಗೋಡು, ಆರ್ಯ ಸಮುದಾಯ ಸಂಘ ಕಾಸರಗೋಡು ಮಾಜಿ ಉಪಾಧ್ಯಕ್ಷ ಕೃಷ್ಣೋಜಿ ರಾವ್ ಮಾಸ್ತರ್ ಅಂಬುಕುಂಜೆ ಶುಭಹಾರೈಸುವರು.