ಪೆಶಾವರ: ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಹಾಗೂ ಅದರಡಿ ಕಾರ್ಯ ನಿರ್ವಹಿಸುವ ಎರಡು ಗುಂಪುಗಳ ವಿರುದ್ಧ ಭಾರಿ ಕಾರ್ಯಾಚರಣೆ ಕೈಗೊಂಡಿರುವ ಪಾಕಿಸ್ತಾನ ಭದ್ರತಾ ಪಡೆಗಳು, ಸಂಘಟನೆಯ ಉನ್ನತ ನಾಯಕ ಸೇರಿ 25 ಉಗ್ರರನ್ನು ಹತ್ಯೆ ಮಾಡಿವೆ.

ಸಂಘರ್ಷ ಪೀಡಿತ ಹಾಗೂ ಬುಡಕಟ್ಟು ಜನರೇ ಹೆಚ್ಚಾಗಿ ಇರುವ ಖೈಬರ್ ಜಿಲ್ಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 11 ಉಗ್ರರು ಗಾಯಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ, ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎಂದು ಸೇನೆ ಮಂಗಳವಾರ ತಿಳಿಸಿದೆ.
'ಈ ಭಯೋತ್ಪಾದಕ ಸಂಘಟನೆ ವಿರುದ್ಧದ ಕಾರ್ಯಾಚರಣೆ ಆಗಸ್ಟ್ 20ರಿಂದ ನಡೆಯುತ್ತಿದೆ. ಸಂಘಟನೆ ನಾಯಕ ಅಬ್ದುಜರ್ ಅಲಿಯಾಸ್ ಸದ್ದಾಂ ಸೇರಿದಂತೆ 25 ಮಂದಿಯನ್ನು ಹತ್ಯೆ ಮಾಡಲಾಗಿದೆ' ಎಂದು ತಿಳಿಸಿದೆ.
'ಸೇನೆ ಕೈಗೊಂಡಿದ್ದ ಈ ಕಾರ್ಯಾಚರಣೆಯಿಂದಾಗಿ ಉಗ್ರ ಸಂಘಟನೆ ಟಿಟಿಪಿ ಹಾಗೂ ಅದರೊಂದಿಗೆ ನಂಟಿರುವ ಸಂಘಟನೆಗಳಿಗೆ ಭಾರಿ ಹಿನ್ನಡೆಯಾಗಿದೆ' ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ಪ್ರಕಟಣೆಯಲ್ಲಿ ತಿಳಿಸಿದೆ.