ಬದಿಯಡ್ಕ: ನೀರ್ಚಾಲು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ಸಾದರಪಡಿಸುವ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಯಕ್ಷಗಾನ ತಾಳಮದ್ದಳೆ ಊರ್ವಶಿ ಶಾಪ-ಉತ್ತರನ ಪೌರುಷ ಆ. 25ರಂದು ನೀರ್ಚಾಲು ಶಾಲಾ ಪರಿಸರದಲ್ಲಿ ಅಪರಾಹ್ನ 2 ರಿಂದ ಜರಗಲಿರುವುದು. ಕಾರ್ಯಕ್ರಮದ ಆಮಂತ್ರಣಪತ್ರಿಕೆಯನ್ನು ಸಂಘದ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ನೀರ್ಚಾಲು ಶಾಲಾ ಆಡಳಿತ ವ್ಯವಸ್ಥಾಪಕ ಜಯದೇವ ಖಂಡಿಗೆ ದೀಪಬೆಳಗಿಸಿ ಉದ್ಘಾಟಿಸುವರು. ಭಾಗವತರಾಗಿ ರಾಮಕೃಷ್ಣಮಯ್ಯ ಸಿರಿಬಾಗಿಲು, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆಮದ್ದಳೆಯಲ್ಲಿ ಗಣೇಶ ಭಟ್ ಬೆಳಾಲು, ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸುವರು. ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರು, ಪವನ್ ಕಿರಣ್ಕೆರೆ, ಪಕಳಕುಂಜ ಶ್ಯಾಂಭಟ್, ವೈಕುಂಠ ಹೇರ್ಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಅರ್ಥದಾರಿಗಳಾಗಿ ಪಾತ್ರ ನಿರ್ವಹಣೆ ಮಾಡಲಿದ್ದಾರೆ.