ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭÀಜನ ಮಂದಿರದಲ್ಲಿ ಆ. 26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ 7 ರಿಂದ ಕು. ಶಿವಪ್ರಿಯಾ ಪಿಲಾಂಕಟ್ಟೆ ಮತ್ತು ಸಂಗಡಿಗರಿಂದ ಸಂಗೀತಾರ್ಚನೆ, 8 ಕ್ಕೆ ಪೂಜೆ, 9ರಿಂದ ವಿವಿಧ ಸ್ಪರ್ಧೆಗಳ ಆರಂಭ. 11.30ರಿಂದ ಪಾಂಚಜನ್ಯ ಕೈಕೊಟ್ಟಿಕಳಿ ಮಹಿಳಾ ತಂಡ ಇವರಿಂದ ಕೈಕೊಟ್ಟಿಕಳಿ, 12 ಕ್ಕೆ ಮಹಾಪೂಜೆ, ಮಧ್ಯಾಹ್ನ ಭೋಜನ ಪ್ರಸಾದ ವಿತರಣೆ. ಅಪರಾಹ್ಣ 2.30ರಿಂದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರೀಮಂದಿರಕ್ಕೆ ಪುಟಾಣಿ ಮಕ್ಕಳ ಮುದ್ದುಕೃಷ್ಣ ವೇಷದೊಂದಿಗೆ ಘೋಷಯಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಪಾಂಚಜನ್ಯ ಬಾಲಗೋಕುಲ ಅಗಲ್ಪಾಡಿ ಇವರಿಂದ ಕುಣಿತ ಭಜನೆ ನಡೆಯಲಿದೆ.
3.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಚಿತ್ರಕಲಾ ಅಧ್ಯಾಪಕ ಬಾಲಸುಬ್ರಹ್ಮಣ್ಯ ಭಟ್ ಮಧುರಕಾನನ ಧಾರ್ಮಿಕ ಉಪನ್ಯಾಸ ನೀಡುವರು. ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಗಾಯತ್ರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧುಸೂದನ ಆಯರ್ ಮಂಗಳೂರು, ನಾರಾಯಣ ಮಣಿಯಾಣಿ ಕಾಟುಕುಕ್ಕೆ, ನಟರಾಜ ಕಲ್ಲಕಳಂಬಿ ಗೌರವ ಉಪಸ್ಥಿತರಿರುವರು. ಸುಧಾಮ ಪದ್ಮಾರು, ಅಚ್ಚುತ ಮಾಸ್ತರ್ ಅಗಲ್ಪಾಡಿ, ವಸಂತಿ ಟೀಚರ್ ಅಗಲ್ಪಾಡಿ, ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಬಾಬು ಮಣಿಯಾಣಿ ಜಯನಗರ, ಉದಯಕುಮಾರ್ ಕಲ್ಲಕಟ್ಟ, ರಾಜೇಶ್ ಮಾಸ್ತರ್ ಅಗಲ್ಪಾಡಿ, ರಮೇಶ್ ಕೃಷ್ಣ ಪದ್ಮಾರು, ಲಾವಣ್ಯ ಗಿರೀಶ್ ಪಾಲ್ಗೊಳ್ಳಲಿದ್ದಾರೆ. ಪ್ರತಿಭಾ ಪುರಸ್ಕಾರ, ವಿದ್ಯಾಭ್ಯಾಸ ಪ್ರೋತ್ಸಾಹಕ ಧನಸಹಾಯ ವಿತರಣೆ ನಡೆಯಲಿದೆ.