HEALTH TIPS

ಬ್ಯಾಂಕ್‍ನಿಂದ 26 ಕೆಜಿ ಗಿರವಿ ಚಿನ್ನ ಕದ್ದ ಪ್ರಕರಣ: ಆರೋಪಿ ಮಾಜಿ ಬ್ಯಾಂಕ್ ಮ್ಯಾನೇಜರ್ ತೆಲಂಗಾಣದಲ್ಲಿ ಬಂಧನ

                 ಕೋಝಿಕ್ಕೋಡ್: ಬ್ಯಾಂಕ್ ಆಫ್ ಮಹಾರಾಷ್ಟ್ರ ವಡಕರ ಶಾಖೆಯಲ್ಲಿ 26 ಕೆಜಿ ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಮಹತ್ವದ ಬಂಧನವಾಗಿದೆ. ಆರೋಪಿ ಮಾಜಿ ಬ್ಯಾಂಕ್ ಮ್ಯಾನೇಜರ್ ಮಾದಾ ಜಯಕುಮಾರ್ ನನ್ನು ಬಂಧಿಸಲಾಗಿದೆ. 

                    ಆರೋಪಿಯನ್ನು ತೆಲಂಗಾಣದಿಂದ ಬಂಧಿಸಲಾಗಿದೆ. ತೆಲಂಗಾಣ ಪೋಲೀಸರ ವಶದಲ್ಲಿರುವ ಮಾದಾ ಜಯಕುಮಾರ್ ನನ್ನು ಬಂಧಿಸಲು ಕೇರಳ ಪೋಲೀಸರ ತನಿಖಾ ತಂಡ ಹೊರಟಿದೆ.

                      ಈತ ಹಲ್ಲೆ ಪ್ರಕರಣದಲ್ಲಿ ತೆಲಂಗಾಣ ಪೆÇಲೀಸರ ವಶದಲ್ಲಿದ್ದ. ಇದರ ಬೆನ್ನಲ್ಲೇ ತೆಲಂಗಾಣ ಪೋಲೀಸರಿಗೆ ವಡಕರದಲ್ಲಿ ಆತನ ವಿರುದ್ಧ ವಂಚನೆ ಪ್ರಕರಣವಿರುವುದು ತಿಳಿದು ಬಂದಿದೆ. ನಂತರ ಅವರು ವಡಕರ ಪೋಲೀಸರನ್ನು ಸಂಪರ್ಕಿಸಿದರು. ಮಾಧಾ ಜಯಕುಮಾರ್ ಕೊಯಮತ್ತೂರಿನ ಮೇಟುಪಾಳ್ಯಂ ಮೂಲದವನು. ಆತ ಕಳ್ಳಸಾಗಣೆ ಮಾಡಿದ್ದ ಎನ್ನಲಾದ 26.24 ಕೆಜಿ ಚಿನ್ನಾಭರಣ ಸೇರಿ ಆತನ ಪತ್ತೆ ಆಗಬೇಕಿದೆ. ಹಗರಣದಲ್ಲಿ ಆತನಿಗೆ ಬೇರೆ ಯಾರಿಂದಲೂ ಸಹಾಯ ಸಿಕ್ಕಿದೆಯೇ ಎಂಬ ಬಗ್ಗೆಯೂ ಪೋಲೀಸರು ತನಿಖೆ ನಡೆಸಲಿದ್ದಾರೆ.

                      ಮಹಾರಾಷ್ಟ್ರ ಬ್ಯಾಂಕ್ ವಡಕರ ಶಾಖೆಯಲ್ಲಿ 17 ಕೋಟಿ ಮೌಲ್ಯದ ಚಿನ್ನ ಕಳೆದು ಹೋಗಿರುವುದಾಗಿ ಜಯಕುಮಾರ್ ವಿಡಿಯೊ ಒಂದರ ಮೂಲಕ ನಂಬಲಾಗದ ಕಥೆಗಳನ್ನು ಹೇಳಿದ್ದ.  ಮೂರು ವರ್ಷಗಳಿಂದ ಬ್ಯಾಂಕಿನಲ್ಲಿದ್ದ ಮ್ಯಾನೇಜರ್ ವರ್ಗಾವಣೆಯಾಗಿದ್ದ. ಬಳಿಕ ಬಂದ ನೂತನ ವ್ಯವಸ್ಥಾಪಕರು ನಡೆಸಿದ ತಪಾಸಣೆಯಲ್ಲಿ ಬ್ಯಾಂಕ್ ನಲ್ಲಿದ್ದ 26 ಕೆಜಿ ಚಿನ್ನ ನಕಲಿ ಎಂಬುದು ಬೆಳಕಿಗೆ ಬಂದಿದೆ. ವರ್ಗಾವಣೆಗೊಂಡಿರುವ ಮಾಜಿ ಮ್ಯಾನೇಜರ್ ಮಾದ ಜಯಕುಮಾರ್ ಹೊಸ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದೆ ದೂರ ಉಳಿದಿದ್ದ.  ನಂತರ ಪೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾದ

                   ವಲಯ ವ್ಯವಸ್ಥಾಪಕರ ಸೂಚನೆಯಂತೆ ಖಾಸಗಿ ಹಣಕಾಸು ಸಂಸ್ಥೆಯ ಚಿನ್ನವನ್ನು ಒತ್ತೆ ಇಟ್ಟು ಕೃಷಿ ಚಿನ್ನದ ಸಾಲ ನೀಡಲಾಗಿದೆ ಎಂಬುದು ಮಾದ ಜಯಕುಮಾರ್ ಅವರ ಪ್ರಮುಖ ವಿವರಣೆ. ಈ ಎಲ್ಲಾ ವಿಷಯಗಳಲ್ಲಿ ಆರೋಪಿಗಳ ಬಂಧನದ ನಂತರ ನಿಖರವಾದ ವಿವರಣೆ ಸಿಗುವ ನಿರೀಕ್ಷೆಯಿದೆ.

                     ಜಿಲ್ಲಾ ಅಪರಾಧ ವಿಭಾಗದ ತಂಡ ಇಂದು ಬ್ಯಾಂಕ್ ಕಚೇರಿಗೆ ಆಗಮಿಸಿ ಪ್ರಕರಣದ ತನಿಖೆ ನಡೆಸಿದೆ. ತನಿಖಾ ತಂಡವು ಬ್ಯಾಂಕ್ ರಿಜಿಸ್ಟರ್‍ಗಳನ್ನು ಪರಿಶೀಲಿಸಿತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ನಂತರ ಜಿಲ್ಲಾ ಅಪರಾಧ ವಿಭಾಗದ ತಂಡ ಪ್ರಥಮ ಬಾರಿಗೆ ನೇರವಾಗಿ ಬ್ಯಾಂಕ್‍ಗೆ ಆಗಮಿಸಿತು.  ಮಾಜಿ ಬ್ಯಾಂಕ್ ಮ್ಯಾನೇಜರ್ ಮಾದಾ ಜಯಕುಮಾರ್ ನ  ವಿಡಿಯೋದಲ್ಲಿ ಉಲ್ಲೇಖಿಸಿರುವ ಖಾಸಗಿ ಹಣಕಾಸು ಸಂಸ್ಥೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ. ತನಿಖಾ ತಂಡವು ಉದ್ಯೋಗಿಗಳು ಮತ್ತು ಮಾಲೀಕರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದೆ.  ವಂಚನೆಯ ಹಿಂದೆ ಜಯಕುಮಾರ್ ಕೈವಾಡವಿದೆ ಎಂದು ಆರೋಪಿಸಿರುವ ಬ್ಯಾಂಕ್ ವಲಯ ವ್ಯವಸ್ಥಾಪಕರನ್ನು ಪೋಲೀಸರು ತಕ್ಷಣ ವಿಚಾರಣೆ ನಡೆಸಲಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries