ಬದಿಯಡ್ಕ: ಬಾಲಗೋಕುಲ ಶ್ರೀಕೃಷ್ಣ ಜನಾಷ್ಟಮಿ ಸಮಿತಿ ಬದಿಯಡ್ಕ ಇದರ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆ. 26 ಸೋಮವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಲಿರುವುದು.
ಅಂದು ಬೆಳಗ್ಗೆ 9 ಕ್ಕೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಿಂದ ಶೋಭಾಯಾತ್ರೆ ಆರಂಭ, 11 ಕ್ಕೆ ಸಭಾ ಕಾರ್ಯಕ್ರಮ ಸಮಿತಿಯ ಗೌರವಾಧ್ಯಕ್ಷ ಪೆರುಮುಂಡ ಶಂಕರನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿಹಿಂಪ ಕಣ್ಣೂರು ವಿಭಾಗ ಮಾತೃಶಕ್ತಿ ಪ್ರಮುಖ್ ಮೀರಾ ಆಳ್ವ ಉದ್ಘಾಟಿಸುವರು. ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಭೋಜನ, ಅಪರಾಹ್ನ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.