ಕುಂಬಳೆ: ಕುಂಬಳೆ ಪೇಟೆಯಲ್ಲಿ ರಾತ್ರಿ ನಿಲುಗಡೆಗೊಳಿಸಿದ್ದ ಬಸ್ಗಳಿಂದ ವ್ಯಾಪಕವಾಗಿ ಡೀಸೆಲ್ ಕಳವುಗೈಯಲಾಗಿದೆ. ಕುಂಬಳೆಯ ಬದಿಯಡ್ಕ ರಸ್ತೆಯಲ್ಲಿನ ಪೆಟ್ರೊಲ್ ಪಂಪ್ ಒಂದರ ಎದುರು ನಿಲ್ಲಿಸಲಾಗಿದ್ದ ಎರಡು ಬಸ್ಗಳಿಂದ 285ಲೀ. ಡೀಸೆಲ್ ಕಳವುಗೈಯಲಾಗಿದೆ.
ಕುಂಬಳೆ-ಮುಳ್ಳೇರಿಯ ಮಧ್ಯೆ ಸಂಚರಿಸುವ ಖಾಸಗಿ ಬಸ್ನಿಂದ ಈ ಕಳವು ನಡೆದಿದೆ. ಒಂದು ಬಸ್ನಿಂದ 135 ಲೀ. ಹಾಗೂ ಇನ್ನೊಂದರಿಂದ 150ಲೀ. ಡೀಸೆಲ್ ಕಳವುಗೈಯಲಾಗಿದೆ. ರಾತ್ರಿ ವೇಳೆ ಇಂಧನ ತುಂಬಿಸಿ ಬೆಳಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದಾಗ ಕಳವು ಬೆಳಕಿಗೆ ಬಂದಿದೆ. ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಕಾರು ಆಗಮಿಸಿದ ದೃಶ್ಯ ಸೆರೆಯಾಗಿದೆ. ಪೊಲಿಸರು ತನಿಖೆ ನಡೆಸುತ್ತಿದ್ದಾರೆ.