HEALTH TIPS

ತಾಂತ್ರಿಕ ನಿರ್ವಹಣೆ: ಪಾಸ್ ಪೋರ್ಟ್ ಸೇವಾ ಪೋರ್ಟಲ್ ಆಗಸ್ಟ್ 29 ರಿಂದ ಸೆಪ್ಟೆಂಬರ್ 2ರವರೆಗೆ ಸ್ಥಗಿತ

    ನವದೆಹಲಿ: ಪಾಸ್‌ಪೋರ್ಟ್ ಸೇವಾ ಪೋರ್ಟಲ್ ನಾಳೆ ಆಗಸ್ಟ್ 29 ರಂದು ರಾತ್ರಿ 8 ರಿಂದ ಸೆಪ್ಟೆಂಬರ್ 2 ರಂದು ಬೆಳಗ್ಗೆ 6 ಗಂಟೆಯವರೆಗೆ ತಾಂತ್ರಿಕ ನಿರ್ವಹಣೆಗೆ ಕಾರಣದಿಂದ ನಾಗರಿಕರ ಸೇವೆಗೆ ಲಭ್ಯವಿರುವುದಿಲ್ಲ.

     ಈ ಅವಧಿಯಲ್ಲಿ ನಾಗರಿಕರಿಗೆ ಹಾಗೂ ಎಲ್ಲಾ ಎಂಇಎ, ಆರ್​ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸಿಸ್ಟಂ ಲಭ್ಯ ಇರುವುದಿಲ್ಲ. ಆಗಸ್ಟ್ 30ಕ್ಕೆ ಬುಕ್ ಆಗಿರುವ ಅಪಾಯಿಂಟ್​ಗಳನ್ನು ಬೇರೆ ದಿನಕ್ಕೆ ನಿಗದಿ ಮಾಡಿ, ಅರ್ಜಿದಾರರಿಗೆ ಅದರ ಮಾಹಿತಿ ಅಪ್​ಡೇಟ್ ಮಾಡಲಾಗುತ್ತದೆ,’ ಎಂದು ಅಡ್ವೈಸರಿ ಬಿಡುಗಡೆ ಮಾಡಲಾಗಿದೆ.


    ದೃಢೀಕೃತ ಅಪಾಯಿಂಟ್‌ಮೆಂಟ್‌ಗಳನ್ನು ಹೊಂದಿರುವ ಅರ್ಜಿದಾರರು ತಮ್ಮ ಮರುನಿಗದಿಪಡಿಸಿದ ಅಪಾಯಿಂಟ್‌ಮೆಂಟ್‌ಗಳ ಕುರಿತು SMS ಅಧಿಸೂಚನೆಗಳನ್ನು ಸ್ವೀಕರಿಸುತ್ತಾರೆ.ಅಪಾಯಿಂಟ್ಮೆಂಟ್ ಪಡೆದಿರುವ ಅಭ್ಯರ್ಥಿಗಳಿಗೆ ಮುಂದಿನ ದಾರಿಗಳ ಬಗ್ಗೆ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಪಾಸ್​ಪೋರ್ಟ್ ಇಲಾಖೆ ಹೇಳಿದೆ.

     ಪಾಸ್​ಪೋರ್ಟ್ ಸೇವಾ ಪೋರ್ಟಲ್ ಮಾತ್ರವಲ್ಲ, ವಿವಿಧೆಡೆ ಇರುವ ಪಾಸ್​ಪೋರ್ಟ್ ಸೇವಾ ಕೇಂದ್ರಗಳೂ ಆಗಸ್ಟ್ 30ರಂದು ಬಂದ್ ಆಗಿರುತ್ತವೆ. ಹೀಗಾಗಿ, ಶುಕ್ರವಾರಕ್ಕೆ ಅಪಾಯಿಂಟ್ಮೆಂಟ್ ಪಡೆದಿರುವ ಅರ್ಜಿದಾರರಿಗೆ ಬೇರೆ ದಿನ ಅಪಾಯಿಂಟ್ಮೆಂಟ್ ಕೊಡಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries