ಕೊಲ್ಲಂ: ಬಸ್ ಟಿಕೆಟ್ ಖರೀದಿ ಮಾಡಲು ಕೇವಲ 2 ರೂಪಾಯಿ ಕಡಿಮೆ ಇದ್ದಿದ್ದಕ್ಕೆ ರಾತ್ರಿ ಅಂತಾನೂ ನೋಡದೆ 8ನೇ ತರಗತಿ ವಿದ್ಯಾರ್ಥಿಯನ್ನು ಬಸ್ನಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.
ಕೊಲ್ಲಂ: ಬಸ್ ಟಿಕೆಟ್ ಖರೀದಿ ಮಾಡಲು ಕೇವಲ 2 ರೂಪಾಯಿ ಕಡಿಮೆ ಇದ್ದಿದ್ದಕ್ಕೆ ರಾತ್ರಿ ಅಂತಾನೂ ನೋಡದೆ 8ನೇ ತರಗತಿ ವಿದ್ಯಾರ್ಥಿಯನ್ನು ಬಸ್ನಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.
ಕೊಲ್ಲಂ ಮೂಲದ ವಿದ್ಯಾರ್ಥಿನಿಯನ್ನು ಕೆಳಗೆ ಇಳಿಸಲಾಗಿದ್ದು, ಈ ಸಂಬಂಧ ಲೇಡಿ ಕಂಡಕ್ಟರ್ ವಿರುದ್ಧ ದೂರು ದಾಖಲಾಗಿದೆ.
ವಿದ್ಯಾರ್ಥಿನಿಯನ್ನು ಸುಲೋಚನಾ ಎಂದು ಗುರುತಿಸಲಾಗಿದೆ. ಈಕೆ ಚೆರಿಜಿಕಾಲದ ನಿವಾಸಿ. ವಿದ್ಯಾರ್ಥಿನಿ ಬಸ್ ಏರುತ್ತಿದ್ದಂತೆ ಲೇಡಿ ಕಂಡಕ್ಟರ್ ಬಳಿ ಬಂದು ಆಂಟಿ ನನ್ನತ್ರ ಎರಡು ರೂಪಾಯಿ ಕೊರತೆ ಇದೆ ದಯವಿಟ್ಟು ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾಳೆ.
ಆದರೆ, ಪೂರ್ತಿ ಹಣ ಕೊಟ್ಟರೆ ಮಾತ್ರ ಟಿಕೆಟ್ ಕೊಡುತ್ತೇನೆ ಎಂದು ಕಂಡಕ್ಟರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ 2 ರೂಪಾಯಿ ನಾನು ಪಾವತಿಸುತ್ತೇನೆ ಎಂದು ಅಲ್ಲಿಯೇ ಇದ್ದ ಸಹಪ್ರಯಾಣಿಕರೊಬ್ಬರು ಹೇಳಿದ್ದಾರೆ. ಆದರೆ, ಅದಕ್ಕೂ ಸಮಯ ಕೊಡದೇ ಹುಡುಗಿಯನ್ನು ತಕ್ಷಣ ಬಸ್ನಿಂದ ಕಂಡಕ್ಟರ್ ಇಳಿಸುವ ಮೂಲಕ ಅಮಾನವೀಯತೆ ಮೆರದಿದ್ದಾರೆ.
ಬಸ್ನಿಂದ ಕೆಳಗೆ ಇಳಿದ ವಿದ್ಯಾರ್ಥಿನಿ ರಸ್ತೆಯಲ್ಲಿ ಅಳುತ್ತಾ ನಿಂತಿರುವುದನ್ನು ಕಂಡ ಮಹಿಳೆಯೊಬ್ಬರು ಆಕೆಯ ತಂದೆಯ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕುಟುಂಬಸ್ಥರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.