ತಿರುವನಂತಪುರಂ: ರಾಜ್ಯದಲ್ಲಿ ಈ ವರ್ಷದ ಓಣಂ ಪೂರ್ವ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಸೆ.3ರಿಂದ 12ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
8ನೇ ತರಗತಿಯಲ್ಲಿ ಕನಿಷ್ಠ ಅಂಕ ಪಡೆಯದವರಿಗೆ ಬ್ರಿಡ್ಜ್ ಕೋರ್ಸ್ ನಡೆಸುವುದಾಗಿಯೂ ಪ್ರಕಟಿಸಲಾಗಿದೆ. ಎರಡು ವಾರಗಳಲ್ಲಿ ಅವರನ್ನು ಮರು ಪರೀಕ್ಷೆಗೆ ಒಳಪಡಿಸಲಾಗುವುದು.
ಇದರೊಂದಿಗೆ ರಾಜ್ಯ ಶಾಲಾ ಕಲೋತ್ಸವ, ಶಾಲಾ ಒಲಿಂಪಿಕ್ಸ್ ಮತ್ತು ವಿಜ್ಞಾನ ಮೇಳದ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸಲಾಗಿದೆ. ಡಿಸೆಂಬರ್ 3 ರಿಂದ 7 ರವರೆಗೆ ತಿರುವನಂತಪುರದಲ್ಲಿ ರಾಜ್ಯ ಮಟ್ಟದ ಶಾಲಾ ಕಲೋತ್ಸವ ನಡೆಯಲಿದೆ. ನವೆಂಬರ್ 4 ರಿಂದ 11 ರವರೆಗೆ ಎರ್ನಾಕುಳಂ ಜಿಲ್ಲೆಯಲ್ಲಿ ಶಾಲಾ ಒಲಿಂಪಿಕ್ಸ್ ನಡೆಯಲಿದೆ. ವಿಜ್ಞಾನ ಮೇಳವು ಅಲಪ್ಪುಳ ಜಿಲ್ಲೆಯಲ್ಲಿ ನವೆಂಬರ್ 14 ರಿಂದ 17 ರವರೆಗೆ ನಡೆಯಲಿದೆ.