ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು 2024 ನೇ ಸಾಲಿನ ಸಂಯೋಜಿತ ಆನೆ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು 2024 ನೇ ಸಾಲಿನ ಸಂಯೋಜಿತ ಆನೆ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಗಣತಿ ಪ್ರಕಾರ ಪ್ರಸ್ತುತ ತಮಿಳುನಾಡಿನಲ್ಲಿ 3,063 ಆನೆಗಳಿವೆ ಎಂದು ತಿಳಿದು ಬಂದಿದೆ. ಕಳೆದ ವರ್ಷ 2961 ಆನೆಗಳು ಇದ್ದವು ಎಂದು ಹೇಳಲಾಗಿತ್ತು.
2017 ರಲ್ಲಿ ತಮಿಳುನಾಡಿನಲ್ಲಿ 2,761 ಆನೆಗಳು ಕಂಡು ಬಂದಿದ್ದವು. ವರ್ಷದಿಂದ ವರ್ಷಕ್ಕೆ ಆನೆ ಸಂತತಿ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದು ಸ್ಟಾಲಿನ್ ಹೇಳಿದ್ದಾರೆ.
2024 ರ ಮೇ ನಲ್ಲಿ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಸಂಯೋಜಿಸಿ ಆನೆ ಗಣತಿ ನಡೆಸಲಾಗಿತ್ತು. ಈ ಗಣತಿ ಪ್ರಕಾರ ಈ ನಾಲ್ಕೂ ರಾಜ್ಯಗಳಲ್ಲಿ ಆನೆಗಳ ಸಂಖ್ಯೆ 14 ಸಾವಿರಕ್ಕೂ ಹೆಚ್ಚು.