ಕಾಸರಗೋಡು : ಜಿಲ್ಲೆಯಲ್ಲಿ ದಿನವೇತನ ಆಧಾರದಲ್ಲಿ ತಾತ್ಕಾಲಿಕವಾಗಿ ವೈದ್ಯರ ನೇಮಕಾತಿಗಾಗಿ ಆಗಸ್ಟ್ 30 ರಂದು ಬೆಳಗ್ಗೆ 10.30ಕ್ಕೆ ಕಾಞಂಗಾಡು ಚೆಮ್ಮಟ್ಟಂ ವಯಲ್‍ನಲ್ಲಿರುವ ಜಿಲ್ಲಾ ಮೆಡಿಕಲ್ ಆಫೀಸ್ ನಲ್ಲಿ ಸಂದರ್ಶನ ನಡೆಯುವುದು. ಈ ಹಿಂದೆ ಅರ್ಜಿ ಸಲ್ಲಿಸಿದವರೂ ಸಂದರ್ಶನದಲ್ಲಿ ಹಾಜರಾಗಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2203118)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೀಟು ತೆರವು:
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಎಂಟಿಟಿಎಂ ಪದವಿ ಕೋರ್ಸ್‍ನಲ್ಲಿ ಜನರಲ್, ಎಸ್ ಟಿ ವಿಭಾಗಗಳಲ್ಲಿ ಸೀಟುಗಳು ತೆರವಾಗಿದ್ದು, ಅರ್ಹ ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 30ರಂದು ಮಧ್ಯಾಹ್ನ 3ಕ್ಕೆ ಕಾಲೇಜು ಕಛೇರಿಯಲ್ಲಿ ಪ್ರಮಾಣ ಪತ್ರಗಳ ಸಹಿತ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.