ಬೆಳಗಾವಿ: ಮಹಾರಾಷ್ಟ್ರದ ಮುಂಬೈ ನಗರದ ಬಳಿ ಇರುವ ಥಾಣೆಯಲ್ಲಿ ಶನಿವಾರ, ಅಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾರಿನ ಮೇಲೆ ಸಗಣಿ, ಮೊಟ್ಟೆ, ಬದನೆಕಾಯಿ, ಬಲೆ ಎಸೆಯಲಾಗಿದೆ. ಇದರಿಂದ ಥಾಣೆ ಸುತ್ತಲಿನ ಪ್ರದೇಶದಲ್ಲಿ ವಾತಾವರಣ ಬಿಗುವಿನಿಂದ ಕೂಡಿದೆ.

ಉದ್ಧವ್ ಅವರು ಶಿವಸೇನೆಯ ತಮ್ಮ ಬಣದ ಕಾರ್ತಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಮಾರ್ಗಮಧ್ಯದಲ್ಲಿ ಕಾರು ಅಡ್ಡಗಟ್ಟಿದ ಕಿಡಿಗೇಡಿಗಳು ಕೈಯಲ್ಲಿದ್ದ ವಸ್ತುಗಳನ್ನು ಕಾರಿನ ಮೇಲೆ ತೂರಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಕಾರ್ ಸುತ್ತುವರಿದ ಪೊಲೀಸರು ಉದ್ಧವ್ ಠಾಕ್ರೆ ಅವರ ರಕ್ಷಣೆಗೆ ಧಾವಿಸಿದರು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಮನಸೇ) ಸಂಸ್ಥಾಪಕ ರಾಜ್ ಠಾಕ್ರೆ ಅವರ ಬೆಂಬಲಿಗರೇ ದಾಳಿ ಮಾಡಿದ್ದಾರೆ. ಥಾಣೆಯ ಸಂಭಾಜಿ ನಗರದಲ್ಲಿ ಆಯೋಜಿಸಿದ್ದ ಉದ್ಧವ್ ಬೆಂಬಲಿಗರ ಸಮಾವೇಶಕ್ಕೂ 'ಮನಸೇ' ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ಉದ್ಧವ್ ಮೇಲೆ ದಾಳಿ ಮಾಡಿದ್ದಾಗಿ ಘೋಷಣೆ ಕೂಗಿದರು ಎಂದು ಮಹಾರಾಷ್ಟ್ರದ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಯುವಕರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ದಾಳಿ ಕೂಡ ರಾಜಕೀಯ ಪ್ರೇರಿತವಾಗಿ ನಡೆದಿದೆ ಎಂದು ಮೂಲಗಳು ಹೇಳಿವೆ.