ವಯನಾಡು: ಮುಂಡಕೈ ಭೂಕುಸಿತದಲ್ಲಿ ಸುಮಾರು 310 ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ 750ಕ್ಕೂ ಹೆಚ್ಚು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದರು.
ಇತ್ತೀಚಿನ ಅಂಕಿಅಂಶಗಳ ಪ್ರಕಾರ 6 ಹೆಕ್ಟೇರ್‍ಗೂ ಹೆಚ್ಚು ಅರಣ್ಯ ಭೂಮಿ ಮಣ್ಣಿನಿಂದ ಆವೃತವಾಗಿದೆ. 50 ಹೆಕ್ಟೇರ್ ಏಲಕ್ಕಿ, 100 ಹೆಕ್ಟೇರ್ ಕಾಫಿ, 70 ಹೆಕ್ಟೇರ್ ಕರಿಮೆಣಸು, 55 ಹೆಕ್ಟೇರ್ ಚಹಾ, ತಲಾ ಹತ್ತು ಎಕರೆ ತೆಂಗು ಮತ್ತು ಬಾಳೆ ತೋಟಗಳು ನಾಶವಾಗಿದೆ. ಇದು ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜು.
80 ಕಾಡು ಕಡಿಯುವ ಯಂತ್ರಗಳು, 150 ಸ್ಪ್ರೇಯರ್‍ಗಳು, 750 ಕೃಷಿ ಉಪಕರಣಗಳು, 150 ಕ್ಕೂ ಹೆಚ್ಚು ಇತರ ಉಪಕರಣಗಳು, 200 ಪಂಪ್ ಸೆಟ್‍ಗಳು ನಾಶವಾಗಿವೆ. ಕೃಷಿ ಸಾಲಗಳ ಮೌಲ್ಯಮಾಪನ ನಡೆಯುತ್ತಿದೆ ಎಂದು ಪ್ರಧಾನ ಕೃಷಿ ಅಧಿಕಾರಿ ತಿಳಿಸಿದ್ದಾರೆ. ಭೂಕುಸಿತದಿಂದ ಸುಮಾರು 5 ಹೆಕ್ಟೇರ್‍ಗೂ ಹೆಚ್ಚು ಅರಣ್ಯ ಭೂಮಿ ನಾಶವಾಗಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.
ಚುರಲ್‍ಮಲಾ ಪಕ್ಕದಲ್ಲಿರುವ 309 ವಿಭಾಗವೂ ಇಲ್ಲವಾಗಿದೆ. ಇದು ಸಾಕಷ್ಟು ಅಪರೂಪದ ಸಸ್ಯ ಪ್ರಭೇದಗಳನ್ನು ಹೊಂದಿರುವ ಪ್ರದೇಶವಾಗಿತ್ತು. ಇದು ಕಳೆದ 10 ವರ್ಷಗಳಲ್ಲಿ 7 ಹೊಸ ಸಸ್ಯ ಪ್ರಭೇದಗಳನ್ನು ಪತ್ತೆಮಾಡಿದ ಸ್ಥಳವಾಗಿದೆ. 2021 ರ ಪಕ್ಷಿ ಸಮೀಕ್ಷೆಯಲ್ಲಿ 166 ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಲಾಗಿತ್ತು. ಇವೆಲ್ಲದರ ರಕ್ಷಣೆಯು ಮಾನವ ಪುನರ್ವಸತಿಯಂತೆ ಸವಾಲಿನದ್ದಾಗಿರಬಹುದು ಎಂದು ಹೇಳಲಾಗಿದೆ.