ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸಲಿರುವ ಸಂಸತ್ತಿನ ಜಂಟಿ ಸದನ ಸಮಿತಿಯಲ್ಲಿ ಲೋಕಸಭೆಯ 21, ರಾಜ್ಯಸಭೆಯ 10 ಸದಸ್ಯರಿದ್ದಾರೆ. ಸಮಿತಿ ಮುಂದಿನ ಅಧಿವೇಶನದ ಒಳಗೆ ವರದಿ ಸಲ್ಲಿಸಲಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಮಿತಿ ಅಧ್ಯಕ್ಷರ ಹೆಸರು ಪ್ರಕಟಿಸುವರು.
ಸಮಿತಿಗೆ ಸದಸ್ಯರನ್ನು ಹೆಸರಿಸುವ ನಿಲುವಳಿಯನ್ನು ಲೋಕಸಭೆ, ರಾಜ್ಯಸಭೆ ಶುಕ್ರವಾರ ಅಂಗೀಕರಿಸಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಿಲುವಳಿ ಮಂಡಿಸಿದರು.
ಸಮಿತಿಯಲ್ಲಿರುವ ಲೋಕಸಭೆ ಸದಸ್ಯರಲ್ಲಿ ಬಿಜೆಪಿಯ ಎಂಟು ಸದಸ್ಯರು ಸೇರಿ ಎನ್‌ಡಿಎ ಮೈತ್ರಿಕೂಟದ 12 ಮಂದಿ ಸದಸ್ಯರಿದ್ದಾರೆ. ಉಳಿದ 9 ಮಂದಿ ಪ್ರತಿಪಕ್ಷದವರು. ರಾಜ್ಯಸಭೆಯ ಸದಸ್ಯರಲ್ಲಿ ಬಿಜೆಪಿಯ 4, ಪ್ರತಿಪಕ್ಷಗಳ 4, ವೈಎಸ್‌ಆರ್‌ಸಿಪಿಯ ಒಬ್ಬರು ಹಾಗೂ ಒಬ್ಬ ನಾಮಕರಣ ಸದಸ್ಯರಿದ್ದಾರೆ.
ಲೋಕಸಭೆ ಸದಸ್ಯರು:
ಜಗದಾಂಬಿಕಾ ಪಾಲ್, ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಅಭಿಜಿತ್ ಗಂಗೋಪಾಧ್ಯಾಯ, ಡಿ.ಕೆ.ಅರುಣಾ (ಎಲ್ಲರೂ ಬಿಜೆಪಿ), ಗೌರವ್ ಗೊಗೋಯಿ, ಇಮ್ರಾನ್ ಮಸೂದ್, ಮೊಹಮ್ಮದ್ ಜಾವೇದ್ (ಎಲ್ಲರೂ ಕಾಂಗ್ರೆಸ್), ಮೊಹಿಬುಲ್ಲಾ (ಸಮಾಜವಾದಿ ಪಕ್ಷ), ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ಎ.ರಾಜಾ (ಡಿಎಂಕೆ), ಲಾವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ), ದಿಲೇಶ್ವರ್ ಕಾಮೈತ್ (ಜೆಡಿಯು), ಅರವಿಂದ್ ಸಾವಂತ್ (ಶಿವಸೇನಾ-ಯುಬಿಟಿ), ಸುರೇಶ್ ಮಾತ್ರೆ (ಎನ್‌ಸಿಪಿ-ಶರದ್ ಪವಾರ್), ನರೇಶ್ ಮಾಸ್ಕೆ (ಶಿವಸೇನೆ), ಅರುಣ್ ಭಾರ್ತಿ (ಲೋಕಜನಶಕ್ತಿ -ರಾಮವಿಲಾಸ್), ಅಸಾದುದ್ದೀನ್ ಒವೈಸಿ (ಎಐಎಂಐಎಂ).
ರಾಜ್ಯಸಭೆ ಸದಸ್ಯರು:
ಬ್ರಿಜ್‌ಲಾಲ್, ಮೇಧಾ ವಿಶ್ರಂ ಕುಲಕರ್ಣಿ, ಗುಲಾಂ ಅಲಿ, ರಾಧಾಮೋಹನ್ ದಾಸ್ ಅಗರವಾಲ್ (ಎಲ್ಲರೂ ಬಿಜೆಪಿ), ಸೈಯದ್ ನಸೀರ್ ಹುಸೇನ್ (ಕಾಂಗ್ರೆಸ್), ಮೊಹಮ್ಮದ್ ನಡಿಮುಲ್ ಹಕ್ (ತೃಣಮೂಲ ಕಾಂಗ್ರೆಸ್), ವಿ.ವಿಜಯಸೈ ರೆಡ್ಡಿ (ವೈಎಸ್‌ಆರ್‌ಸಿಪಿ), ಎಂ.ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ), ಸಂಜಯ್ ಸಿಂಗ್ (ಎಎಪಿ), ಡಿ.ವೀರೇಂದ್ರ ಹೆಗ್ಗಡೆ (ನಾಮನಿರ್ದೇಶನ ಸದಸ್ಯ).