ಕಾಸರಗೋಡು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ 353ನೇ ಆರಾಧನಾ ಮಹೋತ್ಸವ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಆ.21 ರಂದು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಅಂದು ಬೆಳಿಗ್ಗೆ 6.30ಕ್ಕೆ ದೀಪ ಪ್ರತಿಷ್ಠೆ, 8ಕ್ಕೆ ಭಜನಾ ಸಂಕೀರ್ತನೆ 9.30ಕ್ಕೆ ಶೇಣಿ ಬಾಲಮುರಳಿ ಕೃಷ್ಣ ಅವರಿಂದ ಹರಿಕಥೆ, 11ಕ್ಕೆ ಯಕ್ಷಗಾನ ತಾಳಮದ್ದಳೆ ನಡೆಯುವುದು. ಮಧ್ಯಾಹ್ನ 2.30ಕ್ಕೆ ದೇವಕಿತನಯ ಅವರಿಂದ ಹರಿಕಥೆ, 3.30ಕ್ಕೆ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಮತ್ತು ಬಳಗದವರಿಂದ ಭಕ್ತಿ ಗಾನ ಸುಧೆ ಜರಗಲಿದೆ.
ಸಂಜೆ 6ಕ್ಕೆ ಧರ್ಮ ದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯುವುದು. ಸುಧಾಕರ ರಾವ್ ಪೇಜಾವರ ಧಾರ್ಮಿಕ ಭಾಷಣ ಮಾಡುವರು. ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ, ವಕೀಲ ಸದಾನಂದ ರೈ, ಹಿರಿಯ ಪತ್ರ ಕರ್ತ, ರಂಗಕರ್ಮಿ ಸುಬ್ಬಣ್ಣ ಶೆಟ್ಟಿ, ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಟ್ರಸ್ಟ್ ಸಂಚಾಲಕ ನ್ಯಾಯವಾದಿ ಮಹಾಬಲ ಶೆಟ್ಟಿ, ಸಹ ಸಂಚಾಲಕ ವಿಠಲ ಶೆಟ್ಟಿ ಪಾಲ್ಗೊಳ್ಳುವರು.
ಈ ವರ್ಷದ ರಾಘವೇಂದ್ರಾನುಗ್ರಹ ಪ್ರಶಸ್ತಿಗೆ ಆಯ್ಕೆಯಾದ ಭಜನಾ ಸಾಮ್ರಾಟ್, ಹರಿದಾಸ ಜಯಾನಂದ ಹೊಸದುರ್ಗ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಹರಿದಾಸ ತೊನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸುವರು.