ಟೆಲ್ ಅವೀವ್: ಇಸ್ರೇಲ್ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಗಾಜಾದ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ.
ಗಾಜಾದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದ್ದ ಎರಡು ಶಾಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಭಾನುವಾರ ಕನಿಷ್ಠ 25 ಜನರ ಹತರಾಗಿದ್ದಾರೆ ಎಂದು ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ.
ಗಾಜಾದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಪರಿಹಾರ ಶಿಬಿರದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದು, ಇತರರು ಗಾಯಗೊಂಡರು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರತ್ಯೇಕ ದಾಳಿಯಲ್ಲಿ ಉತ್ತರ ಗಾಜಾದ ಮನೆಯೊಂದು ನೆಲಸಮಗೊಂಡಿದ್ದು, ಮೂರು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೇ, ಟೆಲ್ ಅವೀವ್ ಉಪನಗರದಲ್ಲಿ ಪ್ಯಾಲೆಸ್ಟೀನಿಯನ್ನ ಉಗ್ರಗಾಮಿಗಳು ಚಾಕು ಇರಿದು 70 ವರ್ಷದ ವೃದ್ಧೆ ಮತ್ತು 80 ವರ್ಷದ ವೃದ್ಧನನ್ನು ಹತ್ಯೆ ಮಾಡಿದ್ದು, ಇಬ್ಬರು ಪುರುಷರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ ಪಾರುಗಾಣಿಕಾ ಸಂಸ್ಥೆ ತಿಳಿಸಿದೆ.