HEALTH TIPS

ಮುಂದಿನ ಐಪಿಎಲ್​ನಲ್ಲಿ ಈ 3 ತಂಡದ ನಾಯಕರಿಗೆ ಗೇಟ್​ಪಾಸ್! ಆರ್​ಸಿಬಿ​ಯ ಆದ್ಯತೆ ಇವರಿಗೆ ಮಾತ್ರ

 ವದೆಹಲಿ: ಇತ್ತೀಚೆಗಷ್ಟೇ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಭೆ ನಡೆಸಿದ್ದು ಗೊತ್ತೇ ಇದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಗಾ ಹರಾಜಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಬಿಸಿಸಿಐ ನಾಯಕರು ತಂಡಗಳ ಮಾಲೀಕರೊಂದಿಗೆ ಚರ್ಚಿಸಿದರು.

ಈ ಸಭೆಯಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಹಾಗೂ ಉಳಿಸಿಕೊಳ್ಳುವ ಮಿತಿ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಭೆಗೆ ಸಂಬಂಧಿಸಿದ ಹಲವು ವಿಷಯಗಳು ವೈರಲ್ ಆಗಿವೆ. ಇದೇ ಸಂದರ್ಭದಲ್ಲಿ ಈ ಸಭೆಯ ನಂತರ ಅನೇಕ ಫ್ರಾಂಚೈಸಿಗಳು ತಮ್ಮ ನಾಯಕರನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಅದರಲ್ಲೂ 3 ತಂಡಗಳು ತಮ್ಮ ನಾಯಕರಿಗೆ ಗುಡ್ ಬೈ ಹೇಳಲಿವೆ ಎಂಬ ಸುದ್ದಿ ಹೊರಬಿದ್ದಿದೆ.

ಇತ್ತೀಚಿನ ಸಭೆಯಲ್ಲಿ ಹೆಚ್ಚಿನ ಫ್ರಾಂಚೈಸಿಗಳು ಕನಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಕೇಳಿಕೊಂಡವೆ. ಆದರೆ, ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆದರೆ, ಕೆಲವು ತಂಡಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ನಾಯಕರನ್ನು ಬಿಟ್ಟು ಹೊಸಬರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿವೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.

ಮೆಗಾ ಹರಾಜಿಗೂ ಮುನ್ನ ತಮ್ಮ ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಲು ಆರ್‌ಸಿಬಿ ಚಿಂತನೆ ನಡೆಸಿದೆ. 36ರ ಹರೆಯದ ಡುಪ್ಲೆಸಿಸ್ ಈ ವರ್ಷದ ಐಪಿಎಲ್‌ನಲ್ಲಿ 438 ರನ್ ಗಳಿಸಿ ತಂಡವನ್ನು ಪ್ಲೇ ಆಫ್‌ಗೆ ಮುನ್ನಡೆಸಿದ್ದರು. ಆದರೆ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಮಾಲೀಕರು ಅವರನ್ನು ಕೈಬಿಟ್ಟು ಟೀಮ್​​ ಇಂಡಿಯಾದ ಯುವ ಆಟಗಾರನನ್ನು ನಾಯಕನನ್ನಾಗಿ ನೇಮಿಸಲು ಬಯಸಿದ್ದಾರೆ ಎಂದು ತಿಳಿದುಬಂದಿದೆ. ಯುವ ಆಟಗಾರರಿಗೆ ಮೊದಲ ಆದ್ಯತೆ ನೀಡಲು ಆರ್​ಸಿಬಿ ಬಯಸಿದೆ.

ಇನ್ನು ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲದ ಅತ್ಯಂತ ಕೆಟ್ಟ ದಾಖಲೆ ಹೊಂದಿರುವ ಪಂಜಾಬ್ ಕೂಡ ನಾಯಕತ್ವ ಬದಲಾವಣೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆಯಂತೆ. ಹಾಲಿ ನಾಯಕ ಶಿಖರ್ ಧವನ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಈ ಋತುವಿನ ಆರಂಭದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ನಾಯಕನಾಗಿ ಬಂದ ಸ್ಯಾಮ್ ಕರ್ರಾನ್ ಪ್ಲೇಆಫ್‌ಗೆ ತಂಡವನ್ನು ಕೊಂಡೊಯ್ಯುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಸರಿಯಾದ ನಾಯಕನ ಹುಡುಕಾಟ ಆರಂಭಿಸಿದೆ ಎಂದು ವರದಿಯಾಗಿದೆ.

ಐಪಿಎಲ್-2024 ರಲ್ಲಿ ಲಖನೌ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬಗ್ಗೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು ಎಲ್ಲರಿಗೂ ಗೊತ್ತೇ ಇದೆ. ಕೇವಲ ಸೋಲಿನಿಂದ ರಾಹುಲ್‌ಗೆ ಎಲ್ಲರ ಮುಂದೆ ಹಿಡಿಶಾಪ ಹಾಕಿದರೆ ಏನು ಪ್ರಯೋಜನ ಎಂದು ಲಖನೌ ಅಭಿಮಾನಿಗಳು ಮ್ಯಾನೇಜ್‌ಮೆಂಟ್ ಮೇಲೆ ಕಿಡಿಕಾರಿದ್ದರು. ಈ ಘಟನೆಯಿಂದ ರಾಹುಲ್‌ಗೆ ನೋವಾಗಿದ್ದು, ಅವರು ತಂಡವನ್ನು ತೊರೆಯುವುದು ಖಚಿತ ಎಂಬ ಮಾತುಗಳು ಬರುತ್ತಿವೆ. ಲಖನೌ ಮಾಲೀಕರು ಕೂಡ ರಾಹುಲ್ ಅವರನ್ನು ಬಿಡುಗಡೆ ಮಾಡಿ ಉತ್ತಮ ಯುವಕನನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಬಯಸಿದ್ದಾರೆ ಎಂದು ಕೇಳಿಬರುತ್ತಿದೆ. ಇದೇ ನಿಜವಾದರೆ ನಾಯಕನನ್ನು ಬದಲಾಯಿಸುವ ಮೂರನೇ ಫ್ರಾಂಚೈಸಿ ಲಖನೌ ಆಗಲಿದೆ.

ರಿಷಬ್ ಪಂತ್ ಬದಲಿಗೆ ಮತ್ತೊಬ್ಬ ನಾಯಕನನ್ನು ನೇಮಿಸುವ ಅವಕಾಶ ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದೆ. ರಿಷಭ್​ ಸಿಎಸ್​ಕೆಗೆ ಹೋಗುವುದು ಖಚಿತ ಎಂಬ ಮಾತುಗಳು ಬಂದಿವೆ. ಆದರೆ ಈಗ ಅದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಬದಲಾವಣೆ ಮಾತುಗಳು ಕೇಳಿಬರುತ್ತಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries