ಕಾಸರಗೋಡು: ಸರ್ಕಾರದ ಮೂರನೇ ವರ್ಷಾಚರಣೆ ಅಂಗವಾಗಿ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಒಳಪಡಿಸಿ, ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವ ಸ್ಥಳೀಯ ಅದಲತ್ ಸೆಪ್ಟೆಂಬರ್ 3 ರಂದು ಕಾಸರಗೋಡು ನಗರಸಭಾಂಗಣದಲ್ಲಿ ನಡೆಯಲಿದೆ. ಸ್ಥಳೀಯಾಡಳಿತ ಮತ್ತು ಅಬಕಾರಿ ಕಾತೆ ಸಚಿವ ಎಂ.ಬಿ.ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅದಾಲತ್‍ನಲ್ಲಿ ಸ್ಥಳೀಯಾಡಳಿತ ಇಲಾಖೆಗೆ ಸಂಬಂಧಿಸಿದ 12 ವಿಭಾಗಗಳನ್ನೊಳಗೊಂಡ ದೂರು, ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರು ಚಿಜಚಿಟಚಿಣ.ಟsgಞeಡಿಚಿಟಚಿ.gov.iಟಿ ವೆಬ್ ಪೆÇೀರ್ಟಲ್‍ನಲ್ಲಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಇದುವರೆಗೆ ವೆಬ್ ಪೆÇೀರ್ಟಲ್ ಮೂಲಕ ಜಿಲ್ಲೆಯಲ್ಲಿ 127 ದೂರುಗಳು ಲಭಿಸಿದ್ದು, ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಲೇವಾರಿಗೆ ಬಾಕಿ ಇರುವ ದೂರುಗಳನ್ನೂ ಅದಾಲತ್ ನಲ್ಲಿ ಪರಿಗಣಿಸಲಾಗುವುದು. ಆಗಸ್ಟ್ 29ರವರೆಗೆ ವೆಬ್ ಪೆÇೀರ್ಟಲ್ ನಲ್ಲಿ ದೂರು ಸಲ್ಲಿಸಬಹುದು. ಉಪಜಿಲ್ಲಾ ಅದಾಲತ್ ಸಮಿತಿಗಳು ವಿವಿಧ ಸ್ಥಳೀಯ ಸಂಸ್ಥೆಗಳ ದೂರುಗಳನ್ನು ಪರಿಶೀಲಿಸಿ ಅದಾಲತ್‍ಗೆ ವರದಿ ಸಲ್ಲಿಸುತ್ತವೆ. ಸೆಪ್ಟೆಂಬರ್ 3ರಂದು ಬೆಳಗ್ಗೆ8.30ರಿಂದ ನೋಂದಣಿ ಕೌಂಟರ್‍ಗಳು ಕಾರ್ಯನಿರ್ವಹಿಸಲಿದ್ದು, ಅದಾಲತ್‍ನಲ್ಲಿ ಹೊಸ ದೂರುಗಳನ್ನು ಸಹ ಪರಿಗಣಿಸಲಾಗುವುದು. ಆನ್‍ಲೈನ್‍ನಲ್ಲಿ ವೆಬ್ ಪೆÇೀರ್ಟಲ್‍ಗಳಲ್ಲಿ ದಾಖಲಾಗುವ ದೂರುಗಳ ಸ್ಥಿತಿಯನ್ನು ಪರಿಶೀಲಿಸುವ ಸೌಲಭ್ಯವನ್ನು ದೂರುದಾರರಿಗೆ ಒದಗಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಸ್ಥಳೀಯಾಡಳಿತ ಇಲಾಖೆ ಉಪನಿರ್ದೇಶಕ ಕೆ.ವಿ.ಹರಿದಾಸ್, ಸಹಾಯಕ ನಿರ್ದೇಶಕ ಬಿ.ಎನ್.ಸುರೇಶ್ ಉಪಸ್ಥಿತರಿದ್ದರು.