ಕಾಸರಗೋಡು: ಸರ್ಕಾರದ ಮೂರನೇ ವಾರ್ಷಿಕೋತ್ಸವದ ನಾಲ್ಕನೇ 100 ದಿನಗಳ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 30 ರಂದು ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆಯಬೇಕಿದ್ದ ಸ್ಥಳೀಯ ಅದಾಲತನ್ನು ಸೆಪ್ಟೆಂಬರ್ 3 ಕ್ಕೆ ಮುಂದೂಡಲಾಗಿದೆ. ಸಾರ್ವಜನಿಕರಿಗೆ ಆಗಸ್ಟ್ 29ರ ತನಕ ಚಿಜಚಿಟಚಿಣh.ಟsgಞeಡಿಚಿಟಚಿ.gov.iಟಿ ಎಂಬ ವೆಬ್ ಸೈಟ್ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದೆ. ಅದಾಲತ್ ದಿನವಾದ ಸೆಪ್ಟೆಂಬರ್ 3 ರಂದು ನೇರವಾಗಿಯೂ ಅರ್ಜಿ ಗಳನ್ನು ಸಲ್ಲಿಸಬಹುದು. ದೂರು, ಅರ್ಜಿ ಗಳನ್ನು ಪರಿಶೋಧಿಸಿ ಅದಾಲತ್‍ನಲ್ಲಿ ಪಾಲ್ಗೊಳ್ಳುವ ಸಚಿವರ ಉಪಸ್ಥಿತಿಯಲ್ಲಿ ಪರಿಗಣಿಸಿ ತೀರ್ಪುನೀಡಲಾಗುವುದು.
ಕಟ್ಟಡ ಪರ್ಮಿಟ್, ಕಟ್ಟಡ ಪೂರ್ಣಗೊಳಿಸುವಿಕೆ, ವ್ಯಾಪಾರ ವಾಣಿಜ್ಯ ಮತ್ತು ಉದ್ಯಮ ಸೇವಾ ಲೈಸೆನ್ಸ್, ನಾಗರಿಕ ನೋಂದಣಿ, ತೆರಿಗೆಗಳು, ಫಲಾನುಭವಿ ಯೋಜನೆ, ಯೋಜನೆಯ ಅನುಷ್ಠಾನ, ಸಾಮಾಜಿಕ ಭದ್ರತಾ ಪಿಂಚಣಿ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸಂಸ್ಥೆ, ಸೌಲಭ್ಯ ಮತ್ತು ಸುರಕ್ಷತೆ, ಆಸ್ತಿ ನಿರ್ವಹಣೆ, ಸಂಸ್ಥೆಗಳ ದಕ್ಷತೆ, ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವ ವಿಷಯಗಳನ್ನು ಈ ಸಂದರ್ಭ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.