HEALTH TIPS

ಸೆಪ್ಟೆಂಬರ್ 3 ರಂದು ಕಾಸರಗೋಡು ಪುರಭವನದಲ್ಲಿ ಸ್ಥಳೀಯ ಅದಾಲತ್


                ಕಾಸರಗೋಡು: ರಾಜ್ಯ ವಿಧಾನಸಭೆಯ ಮೂರನೇ ವಾರ್ಷಿಕೋತ್ಸವದ ನೂರು ದಿನಗಳ ಕಾರ್ಯಕ್ರಮದ ಅಂಗವಾಗಿ ಮುನ್ಸಿಪಲ್ ಪುರಭವನದಲ್ಲಿ ಆಗಸ್ಟ್ 30ರಂದು ಸ್ಥಳೀಯ ಅದಾಲತ್ ನಡೆಯುವುದು. ಸ್ಥಳೀಯಾಡಳಿತ ಸಂಸ್ಥೆ ಸಚಿವ ಎಂ. ಬಿ. ರಾಜೇಶ್ ಅದಾಲತ್ ನೇತೃತ್ವ ವಹಿಸುವರು.

             ಸಾರ್ವಜನಿಕರಿಗೆ ಆಗಸ್ಟ್ 29ರ ತನಕ ಚಿಜಚಿಟಚಿಣ.ಟsgಞeಡಿಚಿಟಚಿ.gov.iಟಿ ಎಂಬ ವೆಬ್ ಪೆÇೀರ್ಟಲ್‍ನಲ್ಲಿ ಅದಾಲತ್‍ಗೆ ಸಂಬಂಧಿಸಿ ದೂರು ಸಲ್ಲಿಸಬಹುದಾಗಿದೆ.  ದೂರು, ಅರ್ಜಿಗಳನ್ನು ಪರಿಶೋಧಿಸಿ ಸಚಿವರ ಉಪಸ್ಥಿತಿಯಲ್ಲಿ ತೀರ್ಪು ಕಲ್ಪಿಸಲಾಗುವುದು.

             ಅದಾಲತ್ ನೋಂದಣಿ ಕೌಂಟರ್‍ನಲ್ಲಿಯೂ ದೂರುಗಳನ್ನು ಸ್ವೀಕರಿಸಲಾಗುವುದು. ಹೀಗೆ ಸ್ವೀಕರಿಸಿದ ದೂರುಗಳನ್ನು ಅದಾಲತ್ ವೇದಿಕೆಯಲ್ಲಿ ಅದಾಲತ್ ಉಪಸಮಿತಿಯು ಪರಿಶೋಧಿಸುವುದು. ತೀರ್ಪು ನೀಡಲಾಗದ ಅರ್ಜಿಗಳನ್ನು ಜಿಲ್ಲಾ ಮಟ್ಟದ ಅದಾಲತ್ ನಲ್ಲಿ ಪರಿಗಣಿಸಲಾಗುವುದು.

       ಕಟ್ಟಡ ಪರ್ಮಿಟ್ ಪೂರ್ಣಗೊಳಿಸುವಿಕೆ, ಕ್ರಮೀಕರಣ, ವ್ಯಾಪಾರ ವಾಣಿಜ್ಯ ಮತ್ತು ಕೈಗಾರಿಕಾ ಸೇವೆಗಳ ಲೈಸನ್ಸ್, ನಾಗರಿಕ ನೋಂದಣಿ, ತೆರಿಗೆಗಳು, ಫಲಾನುಭವಿ ಯೋಜನೆಗಳು, ಯೋಜನೆಯ ಅನುಷ್ಠಾನ, ಸಾಮಾಜಿಕ ಭದ್ರತಾ ಪಿಂಚಣಿ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಸಂರಕ್ಷಣೆ, ಆಸ್ತಿ ನಿರ್ವಹಣೆ, ಸಂಸ್ಥೆಗಳ  ವ್ಯವಸ್ಥೆಗಳ ಮತ್ತು ಸೌಲಭ್ಯಗಳ ಕಾರ್ಯಕ್ಷಮತೆ ಎಂಬೀ ವಿಷಯಗಳನ್ನು ಅದಲತ್‍ನಲ್ಲಿ ಪರಿಗಣಿಸಲಾಗುವುದು.

           ಪ್ರಸಕ್ತ ಲಭಿಸಿದ ದೂರುಗಳಲ್ಲಿ ಕಟ್ಟಡ ಪರ್ಮಿಟ್, ನಾಗರಿಕ ನೋಂದಣಿ, ಸಾರ್ವಜನಿಕ ಸೌಲಭ್ಯಗಳು ಮತ್ತು ಸಂರಕ್ಷಣೆ, ಆಸ್ತಿ ನಿರ್ವಹಣೆ, ಸಾಮಾಜಿಕ ಭದ್ರತಾ ಪಿಂಚಣಿ, ಫಲಾನುಭವಿ ಯೋಜನೆಗಳು ಮೊದಲಾದ ವಿಷಯಗಳಿಗೆ ಸಂಬಂಧಿಸಿದ ದೂರು ಒಳಗೊಂಡಿರುವುದಾಗಿ ಸ್ಥಳೀಯಾಡಳಿತ ಸಂಸ್ಥೆಯ  ಜಿಲ್ಲಾ ಉಪನಿರ್ದೇಶಕರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries