ಕಾಸರಗೋಡು: ಬಿ.ಎಸ್.ಎನ್.ಎಲ್. ಕೇರಳದಲ್ಲೂ ಸ್ವದೇಶಿ ನೆಲೆಯಲ್ಲಿ ಅಭಿವೃದ್ಧಿ ಪಡಿಸಿದ 4ಜಿ ತಂತ್ರಜ್ಞಾನದ ಟವರ್ ಗಳನ್ನು ಅಳವಡಿಸುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 4ಜಿ ಸಂಪರ್ಕವನ್ನು ಒದಗಿಸಲು ಬಿ.ಎಸ್.ಎನ್.ಎಲ್.ಪೂರ್ಣ ಸಜ್ಜಾಗಿದೆ.
ಮೊದಲ ಹಂತದಲ್ಲಿ ಎಂಟು ಟವರ್‍ಗಳಿಗೆ ಚಾಲನೆ ನೀಡಲಾಗಿದೆ. ಎರಡನೇ ಹಂತದಲ್ಲಿ, ಎಲ್ಲಾ 20 ಟವರ್‍ಗಳಲ್ಲಿ ಅಳವಡಿಸಲಾಗುವುದು. ಮೂರನೇ ಹಂತದಲ್ಲಿ ಎಲ್ಲಾ 24 ಟವರ್‍ಗಳು ಕರಾವಳಿ ಪ್ರದೇಶದಲ್ಲಿ ಸಾಕಾರಗೊಳ್ಳಲಿವೆ. 32 ಖಾಸಗಿ ಟವರ್‍ಗಳ ಸಹಯೋಗದಲ್ಲಿ 4ಜಿ ಸೇವೆಯನ್ನು ಒದಗಿಸಲಾಗುವುದು.
ಮೊದಲ ಹಂತದಲ್ಲಿ ಕಾಸರಗೋಡು ದೂರವಾಣಿ ವಿನಿಮಯ ಕೇಂದ್ರ, ತಳಂಗರ, ಕಾಸರಗೋಡು ಕೋಟೆ, ವಿದ್ಯಾನಗರ, ನುಳ್ಳಿಪಾಡಿ, ಕಳನಾಡು, ದಕ್ಷಿಣ ಕಳನಾಡು ಮತ್ತು ಚೆಮ್ಮನಾಡುಗಳಲ್ಲಿ ಪೂರ್ಣ ಪ್ರಮಾಣದ 4ಜಿ ಸೇವೆಯನ್ನು ಆರಂಭಿಸಲಾಗಿದೆ. ಬಿ.ಎಸ್.ಎನ್.ಎಲ್. ಸೆಂಟರ್ ಫಾರ್ ಡೆವಲಪ್‍ಮೆಂಟ್ ಆಫ್ ಟೆಲಿಮ್ಯಾಟಿಕ್ಸ್, ತೇಜಸ್ ನೆಟ್‍ವಕ್ರ್ಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸೇವೆಗಳ ಸಹಯೋಗದೊಂದಿಗೆ 4ಜಿ ಸೇವೆಗಳನ್ನು ಒದಗಿಸುತ್ತಿದೆ. ಈಗಿರುವ ಟವರ್‍ಗಳನ್ನು 4ಜಿಗೆ ಅಪ್‍ಗ್ರೇಡ್ ಮಾಡುವ ಯೋಜನೆಯೂ ಇದೆ.
ಕೇಂದ್ರ ಸರ್ಕಾರದ 4ಜಿ ಸ್ಯಾಚುರೇಶನ್ ಯೋಜನೆ ಮೂಲಕ ಜಿಲ್ಲೆಯಲ್ಲಿ 31 ಟವರ್ ಗಳು ಸಿದ್ಧಗೊಳ್ಳುತ್ತಿವೆ. ಕೇಂದ್ರದ ಯೋಜನೆಯು ಅರಣ್ಯ ಮತ್ತು ಕರಾವಳಿ ಪ್ರದೇಶಗಳು ಸೇರಿದಂತೆ ಒಳನಾಡು ಪ್ರದೇಶಗಳಲ್ಲಿ ಬಳಕೆದಾರರನ್ನು ಗುರಿಯಾಗಿಸಿದೆ. ಮುಂಬರುವ ವರ್ಷದಲ್ಲಿ ದೇಶದಲ್ಲಿ 5ಜಿ ಸೇವೆಯೂ ಲಭ್ಯವಾಗಲಿದೆ.