ರುದ್ರಪ್ರಯಾಗ: ಭಾರಿ ಮಳೆ ಹಿನ್ನೆಲೆ ಉತ್ತರಾಖಂಡದ ಕೇದಾರನಾಥಕ್ಕೆ ಕಾಲ್ನಡಿಗೆಯ ಮೂಲಕ ಸಾಗುವ ಮಾರ್ಗದಲ್ಲಿ ಸಿಲುಕಿಕೊಂಡಿರುವ ಯಾತ್ರಿಕರನ್ನು ರಕ್ಷಿಸುವ ಕಾರ್ಯಾಚರಣೆ ನಾಲ್ಕನೇಯ ದಿನವೂ ಮುಂದಿವರಿದಿದೆ.
ರುದ್ರಪ್ರಯಾಗ: ಭಾರಿ ಮಳೆ ಹಿನ್ನೆಲೆ ಉತ್ತರಾಖಂಡದ ಕೇದಾರನಾಥಕ್ಕೆ ಕಾಲ್ನಡಿಗೆಯ ಮೂಲಕ ಸಾಗುವ ಮಾರ್ಗದಲ್ಲಿ ಸಿಲುಕಿಕೊಂಡಿರುವ ಯಾತ್ರಿಕರನ್ನು ರಕ್ಷಿಸುವ ಕಾರ್ಯಾಚರಣೆ ನಾಲ್ಕನೇಯ ದಿನವೂ ಮುಂದಿವರಿದಿದೆ.
'ಯಾತ್ರಿಕರು ಸೇರಿದಂತೆ 400 ಜನರನ್ನು ರಕ್ಷಿಸಿ ಲಿಂಚೋಲಿಗೆ ಕಳುಹಿಸಲಾಗಿದೆ.
'ಇನ್ನೂ ಸುಮಾರು 350 ಜನರು ಕಾಲ್ನಡಿಗೆ ಮಾರ್ಗದಲ್ಲಿ ಸಿಲುಕಿಕೊಂಡಿದ್ದಾರೆ. 50 ಜನರು ಲಿಂಚೋಲಿಯಲ್ಲಿ ಬಾಕಿ ಉಳಿದಿದ್ದಾರೆ. ಆದಷ್ಟು ಶೀಘ್ರದಲ್ಲಿ ಸುರಕ್ಷಿತ ಸ್ಥಳಗಳಿಗೆ ಅವರನ್ನು ಸ್ಥಳಾಂತರ ಮಾಡಲಾಗುವುದು' ಎಂದು ಉತ್ತರಾಖಂಡ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಹೇಳಿದರು.
ಇಲ್ಲಿಯವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದರು.
'ಹವಾಮಾನ ವೈಪರೀತ್ಯದಿಂದಾಗಿ ಭಾರತೀಯ ವಾಯುಸೇನೆ ನೀಡಿದ ಚಿನೂಕ್ ಹೆಲಿಕಾಪ್ಟರ್ ಅನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಒಮ್ಮೆಯೂ ಬಳಸಲಾಗಲಿಲ್ಲ. ಎಂಐ17 ಹೆಲಿಕಾಪ್ಟರ್ ಅನ್ನು ಮಾತ್ರ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುತ್ತಿದೆ' ಎಂದು ಹೇಳಿದರು.
'ಕೆಟ್ಟ ಹವಾಮಾನದ ಹಿನ್ನೆಲೆ ಕಾಲ್ನಡಿಗೆ ಮೂಲಕವೇ ಕೇದರನಾಥದಿಂದ ಲಿಂಚೋಲಿಗೆ 400 ಜನರನ್ನು ಕರೆತರಲಾಯಿತು. ಹೆಲಿಕಾಪ್ಟರ್ ಮೂಲಕ ಸಿರ್ಸಿ ಮತ್ತು ಚಂದ್ರಧಾಮ್ ಹೆಲಿಪ್ಯಾಡ್‌ಗೆ ಜನರನ್ನು ಸ್ಥಳಾಂತರ ಮಾಡಲಾಗುತ್ತದೆ' ಎಂದು ತಿಳಿಸಿದರು.
ಪರ್ಯಾಯ ಮಾರ್ಗಗಳ ಮೂಲಕ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಜನರನ್ನು ಸ್ಥಳಾಂತರ ಮಾಡುವ ಕೆಲಸ ಮಾಡುತ್ತಿವೆ ಎಂದೂ ಮಾಹಿತಿ ನೀಡಿದರು.