ತಿರುವನಂತಪುರ: ಭೂಕುಸಿತದಿಂದ ನಲುಗಿ ಹೋಗಿರುವ ಚುರಲ್ಮಲಾ-ಮುಂಡಕೈ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವ ವಿ.ಶಿವನ್ ಕುಟ್ಟಿ ಹೇಳಿರುವರು.
ವಯನಾಡಿನ ವಿಪತ್ತು ಪ್ರದೇಶದ ಶಾಲೆಗಳ ಪರಿಸ್ಥಿತಿಯನ್ನು ಒಳಗೊಂಡಂತೆ ಯೋಜನೆಯನ್ನು ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದರು.
ಒಲಂಪಿಕ್ಸ್ ಮಾದರಿಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಕೇರಳ ಸ್ಕೂಲ್ ಒಲಿಂಪಿಕ್ಸ್ ನವೆಂಬರ್ 4 ರಿಂದ ನಡೆಯಲಿದೆ. ಇದೇ ತಿಂಗಳ 24ರಂದು ತಿರುವನಂತಪುರದಲ್ಲಿ ಒಲಿಂಪಿಕ್ ಪದಕ ವಿಜೇತ ಪಿ.ಆರ್.ಶ್ರೀಜೇಶ್ ಅವರನ್ನು ಸನ್ಮಾನಿಸಲಾಗುವುದು. ಜಕಾರ್ತ ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಮುಹಮ್ಮದ್ ಅನಸ್, ಕುಂಜು ಮುಹಮ್ಮದ್, ಪಿಯು ಚಿತ್ರಾ, ವಿಸ್ಮಯ ಮತ್ತು ನೀನಾ ವಿ ಅವರನ್ನು ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಕ್ರೀಡಾಧಿಕಾರಿಗಳಾಗಿ ನೇಮಿಸಿ ಶೀಘ್ರವೇ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ಲಸ್ ಒನ್ ಪ್ರವೇಶ ಮುಕ್ತಾಯಗೊಂಡಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದಾಗ ರಾಜ್ಯದಲ್ಲಿ 53,261 ಸೀಟುಗಳು ಖಾಲಿಯಾಗಿವೆ. ಅದರಲ್ಲಿ 2497 ಸ್ಥಾನಗಳು ಮಲಪ್ಪುರಂ ಜಿಲ್ಲೆಯಲ್ಲಿವೆ. ಕೆಲವು ಜಿಲ್ಲೆಗಳಲ್ಲಿ ಕೇವಲ ಹತ್ತು ಮಕ್ಕಳ ಬ್ಯಾಚ್‍ಗಳಿವೆ. ಅಂತಹ ಬ್ಯಾಚ್‍ಗಳನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಶಿವನ್‍ಕುಟ್ಟಿ ಹೇಳಿದರು.