HEALTH TIPS

ಈಶಾನ್ಯ ರಾಜ್ಯಗಳು: 592 ಭೂಕುಸಿತಗಳು | ಅಸ್ಸಾಂ ಪ್ರವಾಹ: 880 ಮಂದಿ ಸಾವು

 ಅಸ್ಸಾಂ ಪ್ರವಾಹ: 880 ಮಂದಿ ಸಾವು

'ಕಳೆದ ಐದು ವರ್ಷಗಳಲ್ಲಿ ಅಸ್ಸಾಂನಲ್ಲಿ ಉಂಟಾದ ಪ್ರವಾಹದಲ್ಲಿ ಒಟ್ಟು 880 ಮಂದಿ ಮೃತಪಟ್ಟಿದ್ದಾರೆ' ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ವರ್ಷ;ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ

2019;157

2020;190

2021;73

2022;278

2023;65

2024 (ಜುಲೈವರೆಗೆ);117

ಒಟ್ಟು;880

ಈಶಾನ್ಯ ರಾಜ್ಯಗಳು: 592 ಭೂಕುಸಿತಗಳು

'ಈಶಾನ್ಯ ರಾಜ್ಯಗಳಲ್ಲಿ ಕಳೆದ ಏಳು ವರ್ಷಗಳಲ್ಲಿ ಸಂಭವಿಸಿದ ಭೂಕುಸಿತಗಳ ಸಂಖ್ಯೆಯನ್ನು ಗಮನಿಸಿದರೆ, ಈ ವರ್ಷದ ಏಪ್ರಿಲ್‌-ಜುಲೈ ತಿಂಗಳಲ್ಲೇ ಹೆಚ್ಚಿನ ಭೂಕುಸಿತ ಸಂಭವಿಸಿದೆ. ಕಳೆದ ಏಳು ವರ್ಷಗಳಲ್ಲಿ 396 ಭೂಕುಸಿತ ಸಂಭವಿಸಿದ್ದರೆ, ಈ ವರ್ಷದಲ್ಲಿಯೇ 196 ಇಂಥ ಘಟನೆಗಳು ಸಂಭವಿಸವೆ' ಎಂದು ಭೂ ವಿಜ್ಞಾನ ಸಚಿವ ಜಿತೆಂದ್ರ ಸಿಂಗ್‌ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದರು.

'ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ'ವು ಈ ಸಮೀಕ್ಷೆ ನಡೆಸಿದೆ. ಯಾಕಾಗಿ ಇಂಥ ಘಟನೆಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ, ಇದರ ಗುಣಲಕ್ಷಣಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಸುಮಾರು 20 ವರ್ಷಗಳ ದತ್ತಾಂಶಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕಿದೆ' ಎಂದು ಸಚಿವರು ಹೇಳಿದರು.

(ವರ್ಷ;ಈಶಾನ್ಯ ರಾಜ್ಯಗಳಲ್ಲಿ‌ ಸಂಭವಿಸಿದ ಭೂಕುಸಿತಗಳ ಸಂಖ್ಯೆ)

2017-18;28

2018-19;49

2019-20;45

2020-21;65

2021-22;78

2022-23;102

2023-24;29

2024-25 (ಏಪ್ರಿಲ್‌-ಜುಲೈ ಅವಧಿ);196

ಒಟ್ಟು;592



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries